HEALTH TIPS

ಮುಂದುವರಿದ ಮಲತಾಯಿ ಧೋರಣೆ: ಅಕ್ಷರವರಿಯದ ಪುಟಾಣಿಗಳಿಗೆ ಮಲೆಯಾಳ ಹೇರಿಕೆ ಯತ್ನ

                  ಮುಳ್ಳೆರಿಯ: ಗಡಿನಾಡು ಕಾಸರಗೋಡಿನ ಕನ್ನಡಿಗರ ಮೇಲಾಗುತ್ತಿರುವ ಆಡಳಿತ ವರ್ಗದ ಮಲತಾಯಿ ಧೋರಣೆ ವ್ಯಾಪಕವಾಗಿ ಮುಂದುವರಿಯುತ್ತಿದ್ದು, ಇಲ್ಲಿಯ ಭಾಷಾ ಅಲ್ಪಸಂಖ್ಯಾಕ ಜನರ ಬವಣೆಗೆ ಕೊನೆಯಿಲ್ಲದಾಗಿದೆ. ಕಾಲೇಜು, ಹೈಸ್ಕೂಲು, ಪ್ರಾಥಮಿಕ ವಿಭಾಗಗಳ ಕನ್ನಡ ಶಾಲೆಗಳಲ್ಲಿ ಮಲಯಾಳಿ ಶಿಕ್ಷಕರನ್ನು ನೇಮಿಸಿ ಗಡಿನಾಡು ಕಾಸರಗೋಡಿನ ಕನ್ನಡಿಗರನ್ನು ಗೋಳು ಹೊಯ್ದಿರುವ ಕೇರಳ ಸರ್ಕಾರ ಇದೀಗ ಅಂಗನವಾಡಿ ಶಾಲೆ ಶಿಕ್ಷಕಿಯರ ನೇಮಕದಲ್ಲೂ ಅನ್ಯಾಯವೆಸಗಿದೆ.

       ಗಡಿನಾಡು ಅಂಗನವಾಡಿ ಶಾಲೆಗಳಲ್ಲಿ ದ್ವಿಭಾಷೆ ಗೊತ್ತಿರುವ ಶಿಕ್ಷಕಿಯ ನೇಮಕ ಮಾಡುವ ಬದಲಾಗಿ ಕೇವಲ ಮಲಯಾಳ ಮಾತ್ರವೇ ಬಲ್ಲ ಶಿಕ್ಷಕಿಯನ್ನು ನೇಮಿಸಿರುವುದು ಇದೀಗ ಭಾರೀ ಜನಾಕ್ರೋಶಕ್ಕೆ ಕಾರಣವಾಗಿದೆ. ಕಾರಡ್ಕ ಬ್ಲಾಕ್ ವ್ಯಾಪ್ತಿಯ ಗಡಿಗ್ರಾಮ ದೇಲಂಪಾಡಿ ಪಂಚಾಯತಿಯ ಅಡೂರು ಸಮೀಪದ  ಕೋರಿಕಂಡ ಎಂಬಲ್ಲಿಯ ಅಂಗನವಾಡಿಯಲ್ಲಿ. ಇದರಿಂದ ಹೊಸದಾಗಿ ಶಿಕ್ಷಣ ಕ್ಷೇತ್ರಕ್ಕೆ ಪ್ರವೇಶಿಸುವ ಪುಟಾಣಿ ಕಂದಮ್ಮಗಳಿಗೆ ತೀರ ಅನ್ಯಾಯವಾಗಲಿದೆ. ಕನ್ನಡ, ತುಳು, ಮರಾಠಿ, ಕೊಂಕಣಿ ಮೊದಲಾದ ಮಾತೃಭಾಷೆಯ ಪುಟಾಣಿಗಳು ಮಲಯಾಳಂ ಏನೂ ಅರ್ಥವಾಗದೆ ಕಣ್ಣು ಬಾಯಿ ಬಿಟ್ಟು ನೋಡುವಂತಾಗಿದೆ.


ನಡೆದಿರುವುದೇನು?:

             ಕನ್ನಡ, ತುಳು ಭಾಷಿಕರೇ ಹೆಚ್ಚಿರುವ ದೇಲಂಪಾಡಿ ಗ್ರಾಮ ಪಂಚಾಯತಿ  ವ್ಯಾಪ್ತಿಗೆ ಬರುವ ಅಡೂರಿನ ಕೋರಿಕಂಡ ಅಂಗನವಾಡಿಯಲ್ಲಿ ಒಟ್ಟು 16 ಮಕ್ಕಳಿದ್ದು ಅವರಲ್ಲಿ 14 ಮಂದಿ ಕನ್ನಡ/ತುಳು ಭಾಷಿಗರು. ಇಲ್ಲಿನ ಶಿಕ್ಷಕಿ ಅನಾರೋಗ್ಯ ಕಾರಣ ರಜೆಯಲ್ಲಿರುವುದರಿಂದ ಆರು ತಿಂಗಳ ಅವಧಿಗೆ ಮಲಯಾಳಂ ಭಾಷಿಗ ಶಿಕ್ಷಕಿಯನ್ನು ನೇಮಿಸಲಾಗಿದೆ. ಅವರಿಗೆ ಮಲಯಾಳಂ ಬಿಟ್ಟರೆ ಬೇರೆ ಯಾವ ಭಾಷೆಯೂ ಗಫ್ ಚುಪ್ ಅಂದರೂ ತಿಳಿಯದವರು. 

             ಇದೀಗ ರಜೆ ಮೇಲೆ ತೆರಳಿರುವ ಶಿಕ್ಷಕಿ ಕೆಲಸಕ್ಕೆ ರಾಜೀನಾಮೆ ನೀಡಿದರೆ, ಮಲಯಾಳಂ ಭಾಷಿಕ ಶಿಕ್ಷಕಿಯನ್ನೇ ಖಾಯಂಗೊಳಿಸುವುದು ಸಾಮಾನ್ಯ ನಿಯಮ. ಇದು ಪೋಷಕರ ಆತಂಕಕ್ಕೆ ಕಾರಣವಾಗಿದೆ.

               ಈ ಹಿಂದೆ ಅಂಗನವಾಡಿ ಸಮಿತಿಯ ಮೂಲಕ ಶಿಕ್ಷಕಿಯರ ನೇಮಕಾತಿ ನಡೆಯುತ್ತಿತ್ತು. ದ್ವಿಭಾಷೆ ಗೊತ್ತಿದ್ದವರನ್ನೇ ನೇಮಿಸುತ್ತಿದ್ದರು. ಆದರೆ ಇದೀಗ ಶಿಶು ವಿಕಸನ ಕಛೇರಿಯಿಂದ ನೇಮಕಾತಿ ನಡೆದಿರುವುದರಿಂದ ಈ ಎಡವಟ್ಟಿಗೆ ಕಾರಣ ಎನ್ನಲಾಗಿದೆ. 

ಬುಡಕ್ಕೇ ಕೊಡಲಿಯೇಟು?

         ಸರ್ಕಾರಿ ಕಛೇರಿಗಳಲ್ಲಿ ಕುಳಿತಿರುವ ಮಲಯಾಳಿ ಅಧಿಕಾರಿಗಳಿಗೆ ಮಕ್ಕಳ ಬಗ್ಗೆ ಯಾವುದೇ ಕಾಳಜಿಯಿಲ್ಲ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮಾತೃಭಾμÉಯಲ್ಲಿಯೇ ಕಲಿಯುವುದು ಪ್ರತಿಯೊಂದು ಮಗುವಿನ ಹಕ್ಕು. ಅಂಥದ್ದರಲ್ಲಿ ಅಂಗನವಾಡಿಯಿಂದಲೇ ಮಗುವಿನ ಮೇಲೆ ಮಲಯಾಳ ಹೇರಿಕೆ ಮಾಡಿದರೆ ಕನ್ನಡ ಕಲಿಯಬೇಕಾದ ಮಕ್ಕಳು ಏನು ಮಾಡಬೇಕು ಎಂದು ಅಂಗನವಾಡಿ ವಿದ್ಯಾರ್ಥಿಯ ತಾಯಿಯವರಲ್ಲೊಬ್ಬರಾದ ನಯನ ಸಂಕಷ್ಟದ ಬಗ್ಗೆ ಖೇದ ವ್ಯಕ್ತಪಡಿಸಿ  ಅವಲತ್ತುಕೊಂಡಿದ್ದಾರೆ.

          ಈ ಮೂಲಕ ಪ್ರಾಥಮಿಕ ಹಂತದಿಂದಲೇ ಕನ್ನಡ ಕಲಿಕೆಗೆ ಕೇರಳ ಸರ್ಕಾರ ಕೊಡಲಿಯೇಟು ಹಾಕಲು ನಿರ್ಧರಿಸಿದೆಯೇ ಎಂದು ಕನ್ನಡಿಗರು ಆತಂಕ ವ್ಯಕ್ತಪಡಿಸಿದ್ದಾರೆ.     

          ಕೆಲವು ವರ್ಷಗಳ ಹಿಂದೆ ಅಡೂರು ಶಾಲೆಗೆ ಮಲಯಾಳಂ ಅಧ್ಯಾಪಕರು ನೇಮಕ ಮಾಡಿದ ಕೇರಳ ಸರ್ಕಾರ ಮತ್ತು ಲೋಕಸೇವಾ ಆಯೋಗದ ವಿರುದ್ಧವಾಗಿ ವಿದ್ಯಾರ್ಥಿಗಳು ಕೇರಳದ ಹೈಕೋರ್ಟ ಮೊರೆಹೊದ ಪರಿಣಾಮ ಮಲಯಾಳಂ ಶಿಕ್ಷಕಿಯನ್ನು ವರ್ಗಾವಣೆ ಮಾಡಲಾಯಿತು.ಆದರೂ ಅಧಿಕೃತರು ಇನ್ನೂ ಪಾಠ ಕಲಿತಂತಿಲ್ಲ. 

                ಪ್ರಸ್ತುತ ಕೋರಿಕಂಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿಗೆ ಸ್ವಂತ ಕಡ್ಡದವಿಲ್ಲ. ಅದೀಗ ಬಾಡಿಗೆ ಮನೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದೆ. ನೂತನ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಸ್ಥಳೀಯಾಡಳಿತ ಮತ್ತು ಐಸಿಡಿಎಸ್ ಹಣ ಮೀಸಲಿಟ್ಟಿದೆ ಎಂದು ತಿಳಿದುಬಂದಿದೆ.


                ಅಭಿಮತ: 1) ತಾನು ಕಾಸರಗೋಡು ವ್ಯಾಪ್ತಿಗೆ ಇದೇ ಮೊದಲ ಬಾರಿ ಉದ್ಯೋಗಿಯಾಗಿ ಮೂರು ತಿಂಗಳ ಹಿಂದೆಯಷ್ಟೇ ನೇಮಕಗೊಂಡು ಬಂದಿರುವೆ. ಇಲ್ಲಿಯ ಭಾಷಾ ಸಮಸ್ಯೆಗಳ ಬಗ್ಗೆ ಈವರೆಗೆ ಯಾರೂ, ಏನೊಂದು ಮಾಹಿತಿಯನ್ನೂ ನೀಡಿಲ್ಲ. ಈ ನೇಮಕಾತಿ ನಾನು ಮಾಡಿದ್ದು ಹೌದಾದರೂ, ಪೋಷಕರು ದೂರು ನೀಡಿದಲ್ಲಿ ಪರಿಶೀಲಿಸಲಾಗುವುದು.

                                                -ಶೀಬಾ.

                                              ಮೇಲ್ವಿಚಾರಕಿ.

                                            ಐ.ಸಿ.ಡಿ.ಎಸ್. ಕಾರಡ್ಕ ಬ್ಲಾಕ್.

……………………………………………..

ಅಭಿಮತ: 2) ಅಂಗನವಾಡಿಯಲ್ಲಿ ಕನ್ನಡ ಬಾರದ ಶಿಕ್ಷಕಿಯ ನೇಮಕಾತಿಯ ವಿಚಾರ ಪ್ರಾಧಿಕಾರದ ಗಮನಕ್ಕೆ ಬಂದಿದೆ.ಇದು ಕಾಸರಗೋಡಿನಲ್ಲಿ ಕನ್ನಡ ಭಾಷಿಕರ ಸಾಂವಿಧಾನಿಕ ಹಕ್ಕಿಗೆ ಸೆಗಿರುವ ಅಪಚಾರವಾಗಿದ್ದು, ಅಕ್ಷಮ್ಯ.ಈ ಬಗ್ಗೆ ಗಡಿ ಅಭಿವೃದ್ದಿ ಪ್ರಾಧಿಕಾರದ ಮೂಲಕ ಎರಡೂ ರಾಜ್ಯ ಸರ್ಕಾರಗಳಿಗೂ ಕ್ರಮಕೈಗೊಳ್ಳಲು ವ್ಯವಸ್ಥೆಮಾಡಲಾಗುವುದು.

                              -ಎ.ಆರ್.ಸುಬ್ಬಯ್ಯಕಟ್ಟೆ.

               ಸದಸ್ಯರು. ಕರ್ನಾಟಕ ಗಡಿ ಪ್ರದೇಶಾಭಿವೃದ್ದಿ ಪ್ರಾಧಿಕಾರ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries