ಕುಂಬಳೆ: ಗಮಕ ಕಲಾ ಪರಿಷತ್ತು ಗಡಿನಾಡ ಘಟಕ ಕಾಸರಗೋಡು, ಸಿರಿಗನ್ನಡ ಸಾಂಸ್ಕøತಿಕ ವೇದಿಕೆ ಗಡನಾಡ ಘಟಕ ಕಾಸರಗೋಡು, ತರಂಗಿಣಿ ಆಟ್ರ್ಸ್ & ಸ್ಪೋಟ್ರ್ಸ್ ಕ್ಲಬ್ ಸುಬ್ಬಯಕಟ್ಟೆ, ಕೈರಲಿ ಕುಟುಂಬಶ್ರೀ ಘಟಕ ಸುಬ್ಬಯ ಕಟ್ಟೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಗಮಕ ಶ್ರಾವಣ ಕಾರ್ಯಕ್ರಮ ಸುಬ್ಬಯ್ಯಕಟ್ಟೆ ಟಾಸ್ಕ್ ಸಭಾಂಗಣದಲ್ಲಿ ಜರಗಿತು.
ಕನ್ನಡ ಏಕೀಕರಣ ಹೋರಾಟಗಾರ ನಾಡೋಜ ಕವಿ ಡಾ. ಕಯ್ಯಾರ ಕಿಞಣ್ಣ ರೈ ಅವರ ಪುತ್ರ ಡಾ ಪ್ರಸನ್ನರೈ ಸಮಾರಂಭ ಉದ್ಘಾಟಿಸಿದರು. ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ಟಿ ಶಂಕರನಾರಾಯಣ ಭಟ್ಟ ಅಧ್ಯಕ್ಷತೆ ವಹಿಸಿದ್ದರು. ಪೈವಳಿಕೆ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ತರಂಗಿಣಿ ಕ್ಲಬ್ ಗೌರವಾಧ್ಯಕ್ಷ ಅಶೋಕ ಭಂಡಾರಿ ಮತ್ತು ಖ್ಯಾತ ಲೇಖಕ ಕಾಸರಗೋಡು ಜಿಲ್ಲಾಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿನಾಯ್ಕಾಪು ಮುಖ್ಯ ಅತಿಥಿಗಳಾಗಿ ಭಾಗವಸಿದ್ದರು.
ಹಿರಿಯ ಕೃಷಿಕರೂ ಸಮಾಜಿಕ ಮುಂದಾಳುಗಳೂ ಸುಬ್ಬಯ ಕಟ್ಟೆಯ ರಿಫಯ್ಯಾ ಜುಮಾ ಮಸೀದಿಯ ಅಧ್ಯಕ್ಷರೂ ಆದ ಬಿ ಕೆ ಖಾದರ್ ಹಾಜಿ, ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಈ ಸಂದರ್ಭ ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಷ್ಟ್ರಮಟ್ಟದ ಪ್ರಚಾರಕನಾಗಿ ಸೇವೆ ಸಲ್ಲಿಸಿದ ಚೇವಾರು ಬಾಯಾಡಿ ವೆಂಕಟರಮಣ ಭಟ್ ಅವರನ್ನು ಗೌರವಿಸಲಾಯಿತು.
ಹಿರಿಯರಾದ ಮರುವಳ ನಾರಾಯಣ ಭಟ್, ಕುಂಟಂಗೇರಡ್ಕ ಶ್ರೀವಿಷ್ಣುಮೂರ್ತಿ ಒತ್ತೆಕೋಲ ಸೇವಾ ಸಮಿತಿ ಅಧ್ಯಕ್ಷರಾದ ಶ್ರೀಯಜಮಾನ್ ರಾಮಕೃಷ್ಣ ಭಂಡಾರಿ, ರಿಫಯ್ಯಾ ಜುಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಲತೀಫ್ ಬಿ.ಎ ಮೊದಲಾದವರು ಉಪಸ್ಥಿತರಿದ್ದರು.
ಸಿರಿಗನ್ನಡ ವೇದಿಕೆಯ ಗಡಿನಾಡ ಘಟಕದ ಅಧ್ಯಕ್ಷರಾದ ವಿ ಬಿ ಕುಲಮರ್ವ ಪ್ರಾಸ್ತಾವಿಕ ಮಾತಾನ್ನಾಡಿದರು. ಬಿ.ಎ ಮೊಹಮ್ಮದ ಸ್ಮಾರಕ ಲೈಬ್ರೇರಿಯ ಅಧ್ಯಕ್ಷ ಶಿವಪ್ರಸಾದ ಶೆಟ್ಟಿ ಸ್ವಾಗತಿಸಿದರು. ಎಸ್ ಕೆ ಬಾಲಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಹಾಗೂ ಕೈರಳಿ ಕುಟುಂಬಶ್ರೀಯ ಪುಷ್ಪಾ ಕಮಲಾಕ್ಷ ವಂದಿಸಿದರು.
ಕಾರ್ಯಕ್ರಮದ ಅಂಗವಾಗಿ ಶ್ರೀವಿಷ್ಟು ಶರ್ಮ ನೂಜಿಲ ನೀರ್ಚಾಲು, ಹಾಗೂ ಡಾ.ಶ್ರೀಶಕುಮಾರ್ ಪಂಚಿತ್ತಡ್ಕ ರವರಿಂದ ರಾಮಾಯಣದ ಕಥಾಭಾಗವನ್ನು ಗಮಕ ವಾಚನ ವ್ಯಾಖ್ಯಾನದೊಂದಿಗೆ ಗಮಕ ಶ್ರಾವಣ ಕಾರ್ಯಕ್ರಮವು ನಡೆಯಿತು.