HEALTH TIPS

ಅನಾಥ ಪುಟ್ಟ ಮಗುವಿಗೆ ತಾಯಿಯಾಗಲಿರುವ ಪೊಲೀಸ್ ಅಧಿಕಾರಿ: ತಾಯಿ ಇಲ್ಲದ ದುಃಖ ಚೆನ್ನಾಗಿ ಗೊತ್ತೆಂದ ಹವಾಲ್ದಾರ್ ರಶ್ಮಿ

                 ಪೂಚಕ್ಕಲ್ : ಹೆತ್ತಬ್ಬೆಗಳನ್ನು ಕಳೆದುಕೊಂಡಿರುವ ಪುಟ್ಟ ಮಗುವಿಗೆ ಹಾಲುನೀಡಿ ಪರಿಪೋಷಿಸಲು ಇಚ್ಛಿಸಿದ ಪೋಲೀಸ್ ಅಧಿಕಾರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.

                 ಪೂಚಕ್ಕಲ್ ವಡಕ್ಕೆ ಮಠದ ರಶ್ಮಿಮೋಲ್ ಮಾತನಾಡಿ, ವಯನಾಡ್ ಅನಾಹುತಕ್ಕೆ ಬಲಿಯಾದವರ ಅನಾಥ ಶಿಶುಗಳನ್ನು ಸೇನಾಧಿಕಾರಿಗಳು ಎದೆಗವಚಿ ಕೊಂಡೊಯ್ಯುವ ದೃಶ್ಯಗಳನ್ನು ಟಿವಿ ಚಾನೆಲ್‌ನಲ್ಲಿ ವೀಕ್ಷಿಸಿ ಬೆಚ್ಚಿಬಿದ್ದೆ ಎಂದು ತಿಳಿಸಿರುವ ತ್ರಿಶೂರ್ ಸಿಟಿ ಸೈಬರ್ ಠಾಣೆಯ ಎಎಸ್‌ಐ ಅಪರ್ಣಾ ಲವಕುಮಾರ್ ಅವರು ಬಳಿಕ ಆರು ತಿಂಗಳವರೆಗೆ ಮಗುವನ್ನು ನೋಡಿಕೊಳ್ಳಲು ಸಿದ್ಧ ಎಂದು ಸಂದೇಶ ಕಳುಹಿಸಿದ್ದಾರೆ.

                  ರಶ್ಮಿ ತ್ರಿಪುಣಿತುರಾ ಎಆರ್ ಕ್ಯಾಂಪ್‌ನ ಹವಾಲ್ದಾರ್. ಸದ್ಯ ಹೆರಿಗೆ ರಜೆ ಮೇಲೆ ಮನೆಯಲ್ಲಿದ್ದಾರೆ. ವಯನಾಡಿನಲ್ಲಿ ನಡೆದ ದುರಂತದ ಬಗ್ಗೆ ಕೇಳಿದಾಗ, ತನ್ನ ನಾಲ್ಕೂವರೆ ತಿಂಗಳ ಮಗ ಅಯಾನ್ಶ್ ನ ಮುಖ ತನ್ನ ಮನಸ್ಸಿನಲ್ಲಿ ಮಿನುಗಿತು ಎಂದು ರಶ್ಮಿ ಹೇಳಿದರು. ಕೇವಲ ಎದೆಹಾಲು ಕುಡಿಯುವ ಈ ವಯಸ್ಸಿನಲ್ಲಿ ತಾಯಂದಿರನ್ನು ಕಳೆದುಕೊಂಡ ಶಿಶುಗಳು ಈ ಪರಿಸ್ಥಿತಿಗೆ ಹೇಗೆ ಹೊಂದಿಕೊಳ್ಳುತ್ತಾರೆ ಎಂಬ ಆಲೋಚನೆ ತುಂಬಾ ಕಾಡುತ್ತಿದೆ. ಅದಕ್ಕಾಗಿಯೇ ಅಪರ್ಣಾ ರಜೆ ಮುಗಿಯುವವರೆಗೂ ಮಗುವನ್ನು ನೋಡಿಕೊಳ್ಳುವುದಾಗಿ ತಿಳಿಸಿರುವರು.

                 ನವಂಬರ್  6ರವರೆಗೆ ರಜೆ ಇದೆ. ಅದರ ನಂತರ ಮಕ್ಕಳ ಆರೈಕೆ ರಜೆಯೂ ಲಭ್ಯವಿದೆ. ಇತ್ತೀಚೆಗಷ್ಟೇ ತಾಯಿಯನ್ನು ಕಳೆದುಕೊಂಡ ತನಗೆ ತಾಯಿಯಿಲ್ಲದ ದುಃಖ ಚೆನ್ನಾಗಿ ಗೊತ್ತು ಎಂದಿರುವರು. 2017 ರಲ್ಲಿ ಪೋಲೀಸ್ ಪಡೆಗೆ ಸೇರಿದ್ದ ರಶ್ಮಿಗೆ ಅಕ್ಷಯ್ ಎಂಬ ಮಗನೂ ಇದ್ದಾನೆ. ತಾಯ್ಕಟ್ಟುಸ್ಸೆರಿ ಪಂಚಾಯತ್ ಬಿಜೆಪಿ ಸಮಿತಿಯ ಉಪಾಧ್ಯಕ್ಷರಾದ ಇವರ ಪತಿ ಸನೀಶ್ ಪತ್ನಿ ರಶ್ಮಿ ಅವರ ನಿರ್ಧಾರವನ್ನು ಬೆಂಬಲಿಸಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries