ಭುವನೇಶ್ವರ: ಒಡಿಶಾದ ಉಪ ಮುಖ್ಯಮಂತ್ರಿ ಪ್ರವತಿ ಪರಿದಾ ಅವರು ರಾಜ್ಯ ಸರ್ಕಾರಿ ಮತ್ತು ಖಾಸಗಿ ವಲಯದ ಮಹಿಳಾ ಉದ್ಯೋಗಿಗಳಿಗೆ ಒಂದು ದಿನದ ವೇತನ ಸಹಿತ ಮುಟ್ಟಿನ ರಜೆಯನ್ನು ಗುರುವಾರ ಘೋಷಿಸಿದ್ದಾರೆ.
ಭುವನೇಶ್ವರ: ಒಡಿಶಾದ ಉಪ ಮುಖ್ಯಮಂತ್ರಿ ಪ್ರವತಿ ಪರಿದಾ ಅವರು ರಾಜ್ಯ ಸರ್ಕಾರಿ ಮತ್ತು ಖಾಸಗಿ ವಲಯದ ಮಹಿಳಾ ಉದ್ಯೋಗಿಗಳಿಗೆ ಒಂದು ದಿನದ ವೇತನ ಸಹಿತ ಮುಟ್ಟಿನ ರಜೆಯನ್ನು ಗುರುವಾರ ಘೋಷಿಸಿದ್ದಾರೆ.
ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಸ್ತುವಾರಿಯೂ ಆಗಿರುವ ಪರಿದಾ ಅವರು ಕಟಕ್‌ನಲ್ಲಿ ನಡೆದ ಸ್ವಾತಂತ್ರ್ಯ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಈ ಘೋಷಣೆ ಮಾಡಿದ್ದಾರೆ.
'ಮಹಿಳಾ ಉದ್ಯೋಗಿಗಳು ಮುಟ್ಟಾದ ಮೊದಲ ಅಥವಾ ಎರಡನೇ ದಿನ ವೇತನ ಸಹಿತ ರಜೆ ಪಡೆಯಬಹುದು. ಅದಾಗ್ಯೂ, ರಜೆ ತೆಗೆದುಕೊಳ್ಳುವುದು ಅವರವರ ಇಚ್ಛೆಗೆ ಬಿಟ್ಟಿದೆ' ಎಂದರು.
ಕೀನ್ಯಾದ ನೈರೋಬಿಯಲ್ಲಿ ನಡೆದ 'ಯುನೈಟೆಡ್ ನೇಷನ್ಸ್ ಸಿವಿಲ್ ಸೊಸೈಟಿ ಕಾನ್ಫರೆನ್ಸ್- 2024'ರಲ್ಲಿ ಭಾಗವಹಿಸಿದ್ದ ಒಡಿಶಾದ ಹುಡುಗಿಯೊಬ್ಬಳು ಋತುಸ್ರಾವ ದಿನಗಳಲ್ಲಿ ವೇತನ ಸಹಿತ ರಜೆ ಕೊಡುವುದರ ಬಗ್ಗೆ ಧ್ವನಿ ಎತ್ತಿದ್ದಳು. ಒಡಿಶಾದ ಕಾರ್ಯಕರ್ತೆ ರಂಜಿತಾ ಪ್ರಿಯದರ್ಶಿಸಿ ಅವರು ವೇತನ ಸಹಿತ ಮುಟ್ಟಿನ ರಜೆ ಬಗ್ಗೆ ಅಂತರರಾಷ್ಟ್ರೀಯ ಸಮ್ಮೇಳದಲ್ಲಿ ಎಲ್ಲ ಪ್ರತಿನಿಧಿಗಳ ಗಮನ ಸೆಳೆದಿದ್ದರು. ಮುಟ್ಟಿನ ದಿನಗಳಲ್ಲಿ ಮಹಿಳೆಯರು ದೈಹಿಕ ನೋವಿನಿಂದ ಬಳಲುತ್ತಾರೆ ಎಂದು ವಾದಿಸಿದ್ದರು.