HEALTH TIPS

ದುರಂತವನ್ನು ಗ್ರಹಿಸಲಾಗಿತ್ತೇ? ಶಾಲಾ ಮಕ್ಕಳು ತಿಂಗಳ ಹಿಂದೆ ಉಲ್ಲೇಖಿಸಿ ಬರೆದ ಕಥೆ ಹೇಳುವುದೇನು?

            ಕೆಲವು ಘಟನೆಗಳು ಹೇಗೆ ಘಟಿಸುತ್ತದೆ, ಯಾಕೆ ಎಂಬುದೆಲ್ಲ ನಮ್ಮ ಮಿತಿಗೆ ಒಳಪಡುವುದಿಲ್ಲ. ಹಲವು ಸಂದರ್ಭಗಳಲ್ಲಿ ಘಟನೆಗಳ ಹಿಂದೆ ಆಗುವ ಸಂಭಾವ್ಯತೆಯನ್ನು ಪ್ರವಚಿಸಿಯೋ ಎಂಬAತೆ ಕೆಲವು ಸೂಚನೆಗಳು ಕಣ್ಮುಂದೆ ಹಾದುಹೋಗುವುದಿದೆ. ಅದೂ ನಮ್ಮ ತರ್ಕಕ್ಕೆ ನಿಲುಕದ ವಿಷಯವಾದರೂ ವಿಷಯ ಹೌದು.

           ವಯನಾಡಿನ ವೆಳ್ಳರ್ಮಲ ಸÀರ್ಕಾರಿ ವೊಕೇಷನಲ್ ಹೈಯರ್ ಸೆಕೆಂಡರಿ ಶಾಲೆಯ ಎರಡು ಅಂತಸ್ತಿನ ಕಟ್ಟಡ ಇಲ್ಲದಿದ್ದರೆ ಅನಾಹುತದ ಪ್ರಮಾಣ ಇನ್ನೂ ಹೆಚ್ಚಾಗುತ್ತಿತ್ತು.

             ಈ ಕಟ್ಟಡ ಒಡ್ಡಿದ ತಡೆಯಿಂದ ಪಾರೆಕಲ್ಲುಗಳು, ಮರಗಳಿಗೆ ರಕ್ಷಣೆಯಾಗಿರುವಂತೆ ತೋರುತ್ತಿದೆ. ಶಾಲಾ ಕಟ್ಟಡ ಇಂದಿಲ್ಲವಾದರೂ ಕಟ್ಟಡವು ಶಾಲೆಯ ಹಿಂದೆ ಇರುವ ಇತರ ಮನೆಗಳು ಮತ್ತು ಅಲ್ಲಿ ವಾಸಿಸುವ ಜನರಿಗೆ ರಕ್ಷಣಾತ್ಮಕ ಉಂಗುರವನ್ನು ರೂಪಿಸಿತು. ಬಹುಶಃ ಈ ಶಾಲಾ ಕಟ್ಟಡ ದುರಂತದ ಸ್ಮಾರಕವಾಗಿ ಉಳಿಯುತ್ತದೆ. ಶಾಲಾ ಮಕ್ಕಳು ಸಿದ್ಧಪಡಿಸಿರುವ ಪತ್ರಿಕೆ ಹಾಗೂ ಅದರಲ್ಲಿರುವ ಕಥೆಯನ್ನು ಓದಲೇಬೇಕು.

          ಮುಂಬರುವ ಅನಾಹುತವನ್ನು ಮುನ್ಸೂಚಿಸುವ ಕಥೆ.  ಕಥೆ ಮುಗಿಯುತ್ತಿದ್ದಂತೆ ಆ ಗ್ರಾಮವೇ ಇನ್ನಿಲ್ಲವಾಗಿತ್ತು.  ಶಾಲೆಯ ಶಿಕ್ಷಕರಾದ ಸುರೇಂದ್ರನ್, ಹೃದಯಸ್ಪರ್ಶಿ ಕಥೆಯನ್ನು ಒಳಗೊಂಡಿರುವ ಪತ್ರಿಕೆಯನ್ನು ಉಲ್ಲೇಖಿಸುತ್ತಾರೆ. ‘ವೆಲ್ಲಾರಂ ಕಲ್ಲಂ’(ಬAಡೆ) ಎಂಬ ಹೆಸರಿನಲ್ಲಿ ಪತ್ರಿಕೆಯನ್ನು ಶಾಲೆ ಹೊರತಂದಿತ್ತು. ಮುಖಪುಟದಲ್ಲಿ ಹಸಿರಿನಿಂದ ಆವೃತವಾಗಿರುವ ಶಾಲೆಯ ಚಿತ್ರ ಮತ್ತು ವೆಲ್ಲರಂ ಕಲ್ಲುಗಳ ರಾಶಿ ಇದೆ. ಇಂದು, ಆ ಶಾಲೆಯು ಕಣ್ಮರೆಯಾಗಿದೆ. ವೆಲ್ಲರಂ ಕಲ್ಲಿನ ಬದಲಿಗೆ, ಶಾಲೆಯ ಇಡೀ ಪ್ರದೇಶವು ಬೃಹತ್ ಬಂಡೆಗಳಿAದ ಆವೃತವಾಗಿದೆ.

            ಮಳೆಗೆ ಹೆದರುವ ಕಥೆಯನ್ನು ಲಯ ಎಂಬ ಮಗು ಪತ್ರಿಕೆಯಲ್ಲಿ ಬರೆದಿತ್ತು. ಕಥೆಯಲ್ಲಿ ಅನಸ್ವರ ಮತ್ತು ಅವಳ ಸ್ನೇಹಿತರು ಜಲಪಾತದ ಸೊಬಗನ್ನು ಸವಿಯಲು ಬಂದಿದ್ದರು. ಅಲ್ಲಿಗೆ ಬಂದ ಹಕ್ಕಿಯೊಂದು, ನೀಡಿದ ಎಚ್ಚರಿಕೆ ಕಣ್ಣಿಗೆ ಕಟ್ಟುಂತಿದೆ. ಆದಷ್ಟು ಬೇಗ ಇಲ್ಲಿಂದ ಹೊರಟು ಹೋಗಿ, ದೊಡ್ಡ ಅಪಾಯ ಎದುರಾಗುತ್ತಿದೆ ಮತ್ತು ಪರ್ವತದ ಪ್ರವಾಹದಿಂದ ಪಾರಾಗಬೇಕು ಎಂಬುದು ಹಕ್ಕಿಯ ಎಚ್ಚರಿಕೆಯ ಸಲಹೆ. ಕಥೆಯ ಕೊನೆಯಲ್ಲಿ, ಅದೇ ಜಲಪಾತದಲ್ಲಿ ಭೂಕುಸಿತದಿಂದ ಮೃತಪಟ್ಟ ಮಕ್ಕಳ ಬಗ್ಗೆ ಹೇಳುತ್ತದೆ. 

      ಕಥೆ ನಿಜ. ಇಂದು ಆ ಶಾಲೆ ಇಲ್ಲ, ಮಕ್ಕಳಲ್ಲಿ ಯಾರಿದ್ದಾರೆ ಎಂಬುದು ನಮಗೆ ತಿಳಿದಿಲ್ಲ ಮತ್ತು ಆ ಪ್ರದೇಶವೇ ಅಸ್ತಿತ್ವದಲ್ಲಿಲ್ಲ. ಅಕ್ಷರಶಃ ವೆಲ್ಲರ್ಮಲ ಮಕ್ಕಳು ವಯನಾಡ್ ದುರಂತದ ತಿಂಗಳುಗಳ ಮೊದಲು ಪತ್ರಿಕೆಯಲ್ಲಿ ಬರೆದ ಕಥೆ ನಿಜವಾದುದು ಅಂತೂ ಅಚ್ಚರಿ. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries