ಸಮರಸ ಚಿತ್ರಸುದ್ದಿ: ಮುಳ್ಳೇರಿಯ: ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ರಾಮಾಯಣ ಮಾಸದ ಅಂಗವಾಗಿ ಸ್ಕಂದ ನಿನಾದ ಸಂಗೀತ ಸಭಾದ ಆಶ್ರಯದಲ್ಲಿ ಸಂಗೀತ ವಿದುಷಿ ಉಷಾ ಈಶ್ವರ ಭಟ್ ಅವರ ನೇತೃತ್ವದಲ್ಲಿ ಸಂಗೀತಾರ್ಚನೆ ನಡೆಯಿತು. ದೇವಸ್ಥಾನದ ಟ್ರಸ್ಟಿ ಸೀತಾರಾಮ ಬಳ್ಳುಳ್ಳಾಯ ದೀಪ ಬೆಳಗಿ ಉದ್ಘಾಟಿಸಿದರು. ತಂಡದ ಪ್ರಬಂಧಕ ಅನಂತ ಪದ್ಮನಾಭ ಮಯ್ಯ ನೇತೃತ್ವ ನೀಡಿದರು.