ಕಾಸರಗೋಡು: 110 ಕೆ.ವಿ.ಮೈಲಾಟಿ, ವಿದ್ಯಾನಗರ ಫೀಡರ್‍ಗಳ ಸಾಮಥ್ರ್ಯ ಹೆಚ್ಚಿಸುವ ಕಾಮಗಾರಿ ಹಿನ್ನೆಲೆಯಲ್ಲಿ ಆಗಸ್ಟ್ 13 ರಿಂದ ಸೆಪ್ಟೆಂಬರ್ 12ರ ವರೆಗೆ ಪ್ರತಿದಿನ ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ 110 ಕೆ.ವಿ. ವಿದ್ಯಾನಗರ, ಮಂಜೇಶ್ವರ, ಕುಬಣೂರು ಮತ್ತು ಮುಳ್ಳೇರಿಯಾ ಉಪ ಕೇಂದ್ರಗಳಿಂದ 33 ಕೆ.ವಿ. ಉಪಕೇಂದ್ರಗಳಾದ ಅನಂತಪುರ, ಕಾಸರಗೋಡು ನಗರ, ಬದಿಯಡ್ಕ ಮತ್ತು ಪೆರ್ಲ(ಬಜಕೂಡ್ಲು)ಸಬ್‍ಸ್ಟೇಶನ್‍ಗಳಿಂದ ವಿದ್ಯುತ್ ಪೂರೈಕೆಯಲ್ಲಿ ಭಾಗಶಃ ಅಥವಾ ಸಂಪೂರ್ಣ ವ್ಯತ್ಯಯ ಉಂಟಾಗಬಹುದು ಎಂದು ಮಯಿಲಾಟಿ ನಿರ್ವಹಣಾ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರ ಪ್ರಕಟಣೆ ತಿಳಿಸಿದೆ.