ಪೆರ್ಲ: ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯ ಎನ್.ಸಿ.ಸಿ. ಘಟಕದ ನೇತೃತ್ವದಲ್ಲಿ ಕಾರ್ಗಿಲ್ ವಿಜಯ್ ದಿವಸದ ಆಚರಣೆ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾರಾ ಮಿಲಿಟರಿ ಪೋರ್ಸ್ನ ನಿವೃತ್ತ ಸೈನಿಕ ಅಪ್ಪಯ್ಯ ಮಣಿಯಾಣಿ ಕಾಟುಕುಕ್ಕೆ ಭಾಗವಹಿಸಿದರು. ನಂತರ ಅವರು ಮಾತನಾಡಿ ಇಂದಿನ ಯುವಜನತೆ ಸೈನಿಕರಾಗಿ ದೇಶ ಸೇವೆ ಮಾಡುವಲ್ಲಿ ಆಸಕ್ತಿಯುಳ್ಳವರಾಗಿದ್ದಾರೆ. ಶಾಲಾ ಕಾಲೇಜುಗಳಲ್ಲಿ ಪ್ರವರ್ತಿಸುವ ಎನ್.ಸಿ.ಸಿ ಘಟಕಗಳು ಇದ್ದಕ್ಕೆ ಪ್ರದಾನ ಪಾತ್ರವಹಿಸುತ್ತದೆ ಎಂದು ತಿಳಿಸಿದರು. ಸೈನಿಕ ವೃತ್ತಿ ಯುವಕರಿಗೆ ಶಿಸ್ತು ಕಲಿಸುತ್ತದೆ. ದೇಶಕ್ಕಾಗಿ ಸೇವೆ ಮಾಡಲು ಸಿಗುವ ಭಾಗ್ಯ ಎಲ್ಲರಿಗೂ ಲಭಿಸುವಂತದಲ್ಲ ಎಂದು ಹೇಳಿದರು.
ಕಾಟುಕುಕ್ಕೆ ಶಾಲಾ ಪ್ರಾಂಶುಪಾಲ ಪದ್ಮನಾಭ ಶೆಟ್ಟಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಅಪ್ಪಯ್ಯ ಮಣಿಯಾಣಿಯವರನ್ನು ಸಮ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಮಾಜ ಶಾಸ್ತç ಅಧ್ಯಾಪಕ ರಾಜೇಶ್ ಸಿ.ಎಚ್, ಶ್ರೀವಿದ್ಯಾ ವೇಣುಗೋಪಾಲ್, ರಾಜ್ಯ ಶಾಸ್ತç ಅಧ್ಯಾಪಿಕೆ ರಮಣಿ ಎಂ.ಎಸ್, ಅರ್ಥಶಾಸ್ತ್ರ ಅಧ್ಯಾಪಿಕೆ ವಾಣಿ ಕೆ, ಇಂಗ್ಲಿಷ್ ಅಧ್ಯಾಪಿಕೆ ವಾಣಿಶ್ರೀ, ಇತಿಹಾಸ ಅಧ್ಯಾಪಕರಾದ ಕೃಷ್ಣ ಕುಮಾರಿ, ಮಹೇಶ್ ಏತಡ್ಕ , ಕನ್ನಡ ಅಧ್ಯಾಪಿಕೆ ಸುಶ್ಮಿತಾ ಶೆಟ್ಟಿ, ಸಂಸ್ಕೃತ ಅಧ್ಯಾಪಕ ಅಪ್ಪು ಕೃಷ್ಣನ್ ಉಪಸ್ಥಿತರಿದ್ದರು. ಎನ್.ಸಿ.ಸಿ. ಹಳೆ ವಿದ್ಯಾರ್ಥಿನಿ ತನುಜಾ ಬಿ, ಎನ್.ಸಿ.ಸಿ. ಅಧಿಕಾರಿ ಲೆಫ್ಟಿನೆಂಟ್ ಈಶ್ವರ ನಾಯಕ್ ಕೆ. ಸ್ವಾಗತಿಸಿ, ವಿದ್ಯಾರ್ಥಿನಿ ಸ್ವರ್ಣ ಲಕ್ಷ್ಮಿ ವಂದಿಸಿದರು. ಶಿವಾನಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಗಿಲ್ ಯುದ್ದದಲ್ಲಿ ಮಡಿದ ಸೈನಿಕರಿಗೆ ಪುಷ್ಪಾರ್ಚನೆಯ ಮೂಲಕ ಗೌರವ ಸಲ್ಲಿಸಲಾಯಿತು.