ಸಣ್ಣದೊಂದು ರುಚಿ ವ್ಯತ್ಯಾಸವನ್ನೂ ವಿವೇಚಿಸುವ ಸಾಮಥ್ರ್ಯವಿರುವವರಿಗೆ ಸುವರ್ಣಾವಕಾಶ. ಕಾಫಿ ಬೋರ್ಡ್ ಆಫ್ ಇಂಡಿಯಾವು ದೇಶದ ಕಾಫಿ ಉದ್ಯಮ ವಲಯದಲ್ಲಿ ತರಬೇತಿ ಪಡೆದ ಜನರನ್ನು ತಯಾರಿಗೊಳಿಸುವ ಉದ್ದೇಶದಿಂದ ಕಾಫಿ ಗುಣಮಟ್ಟ ನಿರ್ವಹಣೆಯಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ.
ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ರಸಾಯನಶಾಸ್ತ್ರ, ಜೈವಿಕ ತಂತ್ರಜ್ಞಾನ, ಜೈವಿಕ ವಿಜ್ಞಾನ, ಆಹಾರ ತಂತ್ರಜ್ಞಾನ, ಆಹಾರ ವಿಜ್ಞಾನ, ಪರಿಸರ ವಿಜ್ಞಾನ ಅಥವಾ ಯಾವುದೇ ಇತರ ವಿಭಾಗ ಅಥವಾ ಕೃಷಿ ವಿಜ್ಞಾನದಲ್ಲಿ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಯ್ಕೆಯು ಶೈಕ್ಷಣಿಕ ಅರ್ಹತೆ, ವೈಯಕ್ತಿಕ ಸಂದರ್ಶನ ಮತ್ತು ಸಂವೇದನಾ ಮೌಲ್ಯಮಾಪನ ಪರೀಕ್ಷೆಯನ್ನು ಆಧರಿಸಿರುತ್ತದೆ.
ಮೂರು ತ್ರೈಮಾಸಿಕಗಳಲ್ಲಿ ನಡೆಸುವ 12-ತಿಂಗಳ ಕಾರ್ಯಕ್ರಮಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಮೊದಲ ತ್ರೈಮಾಸಿಕವು ಚಿಕ್ಕಮಗಳೂರು ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆಯಲ್ಲಿ ನಡೆಯಲಿದೆ. ಎರಡು ಮತ್ತು ಮೂರು ತ್ರೈಮಾಸಿಕಗಳು ಬೆಂಗಳೂರಿನಲ್ಲಿ ಇರುತ್ತವೆ. ಅರ್ಜಿ ಶುಲ್ಕ 1,500 ರೂ. ಅರ್ಜಿ ಮತ್ತು ಪೂರಕ ದಾಖಲೆಗಳನ್ನು ವಿಭಾಗೀಯ ಮುಖ್ಯಸ್ಥರು, ಕಾಫಿ ಗುಣಮಟ್ಟ, ಕಾಫಿ ಮಂಡಳಿ, ನಂ-1 ಡಾ. ಬಿ. ಆರ್ ಅಂಬೇಡ್ಕರ್ ರೋಡ್, ಬೆಂಗಳೂರು-560001 ಗೆ ಕಳುಹಿಸಬೇಕು. ಆಯ್ಕೆ ಮತ್ತು ಸಂದರ್ಶನ ಸೆಪ್ಟೆಂಬರ್ 18 ರಂದು ನಡೆಯಲಿದೆ.
ವಿವರವಾದ ಅಧಿಸೂಚನೆ, ಅರ್ಜಿ ನಮೂನೆ ಇತ್ಯಾದಿಗಳಿಗಾಗಿ
coffeeboard.gov.in/News.aspx
ನಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದು ಹೆಚ್ಚಿನ ಮಾಹಿತಿಗಾಗಿ
coffeeboard.gov.in ಭೇಟಿ ನೀಡಬಹುದು.