ಬದಿಯಡ್ಕ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕುಂಬ್ಡಾಜೆ ಇದರ ವತಿಯಿಂದ ಸೆ.7 ಶನಿವಾರದಂದು ಮವ್ವಾರು ಶ್ರೀ ಗಣೇಶ ಮಂದಿರದಲ್ಲಿ ನಡೆಯುವ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಗೋಸಾಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಜರಗಿತು.
ಕ್ಷೇತ್ರದ ಆನುವಂಶಿಕ ಮೊಕ್ತೇಸರರಾದ ಶ್ರೀನಿವಾಸ ಅಮ್ಮಣ್ಣಾಯ ಪಾವೂರು ದೀಪ ಬೆಳಗಿಸಿ ಉದ್ಘಾಟಿಸಿದರು. ಶ್ರೀ ಮಹಿಷಮರ್ದಿನಿ ಸೇವಾ ಸಮಿತಿ ಗೋಸಾಡ ಇದರ ಅಧ್ಯಕ್ಷ ಅನಂತ ಭಟ್ ಕುರುಮುಜ್ಜಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಕುಂಬ್ಡಾಜೆ ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಮಿತಿಯ ಅಧ್ಯಕ್ಷ ಡಾ.ವೇಣುಗೋಪಾಲ ಕಳೆಯತೋಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಮಿತಿಯ ಪ್ರಧಾನ ಕಾರ್ಯದರ್ಶಿ ಗಂಗಾಧರ ರೈ ಮಠದಮೂಲೆ, ಗಣೇಶೋತ್ಸವ ಸಮಿತಿಯ ಉಪಾಧ್ಯಕ್ಷ ನಿವೃತ್ತ ಎಫ್.ಒ. ಕರಿಯಪ್ಪ, ಗಣೇಶೋತ್ಸವ ಸಮಿತಿಯ ಕೋಶಾಧಿಕಾರಿ ಕೃಷ್ಣ ವೈ.ಅಗಲ್ಪಾಡಿ, ಪರಮೇಶ್ವರ ಭಟ್ ಗೋಸಾಡ, ಚಂದ್ರಶೇಖರ ಕುರುಪ್, ಸುಬ್ಬ ಪಾಟಾಳಿ ಗೋಸಾಡ, ನರಸಿಂಹ ಭಟ್, ಜನಾರ್ದನ ಆಚಾರ್ಯ, ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು ಹಾಗೂ ಊರ ಪ್ರಮುಖರು ಉಪಸ್ಥಿತರಿದ್ದರು.