ಕಾಸರಗೋಡು: ಆಚಾರ್ಯ ಪಿ ಸಿ ರೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ, ಸ್ವದೇಶಿ ವಿಜ್ಞಾನ ಆಂದೋಲನ ಕೇರಳ ವತಿಯಿಂದ ವಿಜ್ಞಾನ ಶಿಕ್ಷಕರಿಗಾಗಿ ಐಸಿಎಆರ್-ಸಿಪಿಸಿಆರ್‍ಐ ಕೇಂದ್ರದಲ್ಲಿ ಕ್ಷೇತ್ರ ಸಂದರ್ಶನ ಮತ್ತು ಪ್ರಯೋಗಾಲಯ ಭೇಟಿಯನ್ನು ಆಯೋಜಿಸಿತು.
ಸಿಪಿಸಿಆರ್‍ಐ ಪ್ರಭಾರ ನಿರ್ದೇಶಕ ಡಾ.ಮುರಳಿ ಗೋಪಾಲ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ನಮ್ಮ ಸಂಶೋಧನಾ ಪ್ರಕ್ರಿಯೆಗಳಲ್ಲಿ ನಾವೀನ್ಯತೆ ಮತ್ತು ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು ಸ್ಥಳೀಯ ಜ್ಞಾನಕ್ಕೆ ಸಮಾನವಾದ ಪ್ರಾಮುಖ್ಯತೆಯನ್ನು ನೀಡಬೇಕು ಎಂದು ಅವರು ಶಿಕ್ಷಕರಿಗೆ ಸಲಹೆ ನೀಡಿದರು.
ಸಮಾಜ ವಿಜ್ಞಾನಗಳ ಮುಖ್ಯಸ್ಥ ಡಾ. ಪೆÇನ್ನುಸಾಮಿ ಉಪಸ್ಥಿತರಿದ್ದರು. ಡಾ.ಕೆ.ಮುರಳೀಧರನ್ ಅವರು ಸ್ವಾಶ್ರಯ ಭಾರತ ಸಂದರ್ಭದಿಂದ ಪಿ ಸಿ ರೇ ಅವರ ಕೊಡುಗೆ ಹಾಗೂ ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ವಿಜ್ಞಾನಿಗಳ ಕೊಡುಗೆಯನ್ನು ವಿವರಿಸಿದರು.