ಕಾಸರಗೋಡು: ಹಿಂದಿಯ ಖ್ಯಾತ ಕತೆ-ಕಾದಂಬರಿಕಾರ ಮುನ್ಷಿ ಪ್ರೇಮಚಂದ್ ಅವರ ಜನ್ಮದಿನವನ್ನು ಕಾಸರಗೋಡು ಸರ್ಕಾರಿ ಯುಪಿ ಶಾಲೆಯಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.
ಶಾಲಾ ಹಿಂದಿ ಕ್ಲಬ್ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ಐದನೇ ತರಗತಿ ವಿದ್ಯಾರ್ಥಿ ಕೆ.ಪಿ.ಅನಿರುದ್ಧ್ ಕತೆ-ಕಾದಂಬರಿಕಾರ ಪ್ರೇಮಚಂದ್ ಪಾತ್ರ ನಿರ್ವಹಿಸಿದರು. ಹೊಸದುರ್ಗ ಬಿ.ಪಿ.ಡಿ ಡಾ. ಕೆ.ವಿ.ರಾಜೇಶ್ ಸಮಾರಂಭ ಉದ್ಘಾಟಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ರಶೀದ್ ಪೂಣರಣಂ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಆರನೇ ತರಗತಿ ವಿದ್ಯಾರ್ಥಿನಿ ಇಶಾ ಕೆ ಲೈಜು ಬರೆದು ತಯಾರಿಸಿದ ಪ್ರೇಮಚಂದ್ ಅವರ ಸಂಕ್ಷಿಪ್ತ ಜೀವನಚರಿತ್ರೆಯನ್ನು ಡಾ. ಕೆ.ವಿ.ರಾಜೇಶ್ ಬಿಡುಗಡೆಗೊಳಿಸಿದರು. ಎಸ್ ಎಂಸಿ ಅಧ್ಯಕ್ಷ ಕೆ.ಸಿ.ಲೈಜುಮೋನ್, ಹಿಂದಿ ಶಿಕ್ಷಕ ಕೆ.ಎನ್.ಸುನಿಲ್ ಕುಮಾರ್, ಸರ್ವಮಂಗಳರಾವ್ ಹಾಗೂ ಹಿಂದಿ ಕ್ಲಬ್ ಸದಸ್ಯರಾದ ಕೆ.ಅನಿಕಾ, ಪಿ.ಅರ್ಕಾ ಶೆಟ್ಟಿ ಉಪಸ್ಥಿತರಿದ್ದರು. ಮುಖ್ಯಶಿಕ್ಷಕಿ ಡಿ.ವಿಮಲಾಕುಮಾರಿ ಸ್ವಾಗತಿಸಿದರು. ಸಿಬ್ಬಂದಿ ಕಾರ್ಯದರ್ಶಿ ಎ.ಶ್ರೀಕುಮಾರ್ ವಂದಿಸಿದರು.