ತಿರುವನಂತಪುರಂ: ನಕಲಿ ಪ್ರಮಾಣಪತ್ರ ಪ್ರಕರಣದಲ್ಲಿ ಆರೋಪಿಯಾಗಿರುವ ಎಸ್‍ಎಫ್‍ಐ ಮಾಜಿ ನಾಯಕಿ ಕೆ.ವಿದ್ಯಾ ಅವರಿಗೆ ಪಿಎಚ್‍ಡಿ ವ್ಯಾಸಂಗ ಮುಂದುವರಿಸಲು ಅಡ್ಡಿ ಇಲ್ಲ ಎಂದು ಕಾಲಡಿ ವಿಶ್ವವಿದ್ಯಾಲಯ ನೇಮಿಸಿದ್ದ ಆಂತರಿಕ ತನಿಖಾ ಸಮಿತಿ ವರದಿ ನೀಡಿದೆ.
ಮುಂದಿನ ಶೈಕ್ಷಣಿಕ ಪರಿಷತ್ತಿನ ಸಭೆಯು ಶೈಕ್ಷಣಿಕ ಸಂಶೋಧನೆಯನ್ನು ಮುಂದುವರೆಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ.
ವಿದ್ಯಾ ಅವರ ನಕಲಿ ಪ್ರಮಾಣಪತ್ರ ಪ್ರಕರಣಕ್ಕೂ ಸಂಸ್ಕøತ ವಿಶ್ವವಿದ್ಯಾಲಯದಲ್ಲಿ ಪಿಎಚ್‍ಡಿ ಅಧ್ಯಯನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸಿಂಡಿಕೇಟ್ ಉಪಸಮಿತಿ ನಿರ್ಧರಿಸಿದೆ. ಶಾಸಕ ಕೆ.ಪ್ರೇಮಕುಮಾರ್ ನೇತೃತ್ವದ ಸಿಂಡಿಕೇಟ್ ಉಪಸಮಿತಿ ನೀಡಿರುವ ವರದಿಯಲ್ಲಿ ವಿವಿಯ ಹೊರಗಿರುವ ಘಟನೆಯಿಂದಾಗಿ ವಿದ್ಯಾ ಅವರ ಸಂಶೋಧನಾ ಅಧ್ಯಯನ ನಿಲ್ಲಿಸಬಾರದು ಎಂದು ಸೂಚಿಸಲಾಗಿದೆ. ವಿದ್ಯಾ ಅವರ ಪಿಎಚ್‍ಡಿ ಪ್ರವೇಶ ಮೀಸಲಾತಿ ನಿಯಮ ಪಾಲನೆಯಾಗಿಲ್ಲ ಎಂಬ ಆರೋಪವೂ ನಿರಾಧಾರ ಎಂದು ಸಿಂಡಿಕೇಟ್ ಉಪಸಮಿತಿ ಅಭಿಪ್ರಾಯಪಟ್ಟಿದೆ. ಇದು ವಿದ್ಯಾ ಸಂಶೋಧನೆಯನ್ನು ಮುಂದುವರಿಸಲು ದಾರಿ ಮಾಡಿಕೊಟ್ಟಿದೆ.
ಮುಂದಿನ ಶೈಕ್ಷಣಿಕ ಪರಿಷತ್ತಿನ ಸಭೆಯಲ್ಲಿ ಈ ಅರ್ಜಿ ಕುರಿತು ಅನುಕೂಲಕರ ನಿರ್ಧಾರ ಕೈಗೊಳ್ಳುವ ಸೂಚನೆಗಳಿವೆ. ಅತಿಥಿ ಉಪನ್ಯಾಸಕರ ನೇಮಕಾತಿಗಾಗಿ ನಕಲಿ ಕೆಲಸದ ಅನುಭವ ಪ್ರಮಾಣಪತ್ರ ಸಲ್ಲಿಸಿದ ಪ್ರಕರಣದಲ್ಲಿ ಎಸ್‍ಎಫ್‍ಐ ಮಾಜಿ ನಾಯಕಿ ಕೆ.ವಿದ್ಯಾ ಅವರನ್ನು ಪೋಲೀಸರು ಬಂಧಿಸಿದ್ದಾರೆ. ಬಂಧಿತರಾದಾಗ ವಿದ್ಯಾ ಕಲಾಡಿ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿನಿಯಾಗಿದ್ದರು.
ಆಕೆಯ ಬಂಧನದ ನಂತರ, ವಿದ್ಯಾ ಅವರ ಪಿಎಚ್‍ಡಿ ಪ್ರವೇಶದ ಬಗ್ಗೆ ವಿವಾದವಿತ್ತು. ಮೀಸಲಾತಿ ಮಾನದಂಡ ಅನುಸರಿಸದೆ ವಿದ್ಯಾಗೆ ಪಿಎಚ್ ಡಿ ಪ್ರವೇಶ ನೀಡಲಾಗಿದೆ ಎಂಬುದು ಪ್ರಮುಖ ಆರೋಪವಾಗಿತ್ತು. ಇದರೊಂದಿಗೆ ವಿಶ್ವವಿದ್ಯಾಲಯವು ಘಟನೆಯ ತನಿಖೆಗೆ ಸಿಂಡಿಕೇಟ್ ಸದಸ್ಯ ಕೆ.ಪ್ರೇಮಕುಮಾರ್ ನೇತೃತ್ವದ ಸಮಿತಿಯನ್ನು ನೇಮಿಸಿತು. ನಕಲಿ ಪ್ರಮಾಣಪತ್ರ ಪ್ರಕರಣದಲ್ಲಿ ವಿದ್ಯಾ ವಿರುದ್ಧ ಪೆÇಲೀಸರು ಇತ್ತೀಚೆಗೆ ಚಾರ್ಜ್ ಶೀಟ್ ಸಲ್ಲಿಸಿದ್ದರು.