ಕಾಸರಗೋಡು: ನಗರದ ಎಸ್.ವಿ.ಟಿ ರಸ್ತೆ ಪೇಟೆ ಶ್ರೀ ಪೇಟೆ ವೆಂಕಟ್ರಮಣ ದೇವಸ್ಥಾನ ಹಾಗೂ ಶ್ರೀ ಗುರುರಾಘವೇಂದ್ರ ಸ್ವಾಮಿ ವೃಂದಾವನ ಸೇವಾ ಸಮಿತಿ ವತಿಯಿಂದ ಶ್ರೀ ಗುರುರಾಘವೇಂದ್ರ ಸಾರ್ವಭೌಮರ ಪುಣ್ಯತಿಥಿ, ಆರಾಧನಾ ಮಹೋತ್ಸವ ಜರುಗಿತು. ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣುಆಸ್ರ ನೇತೃತ್ವ ವಹಿಸಿದ್ದರು. ಕೆ.ಎನ್ ವೆಮಕಟ್ರಮಣ ಹೊಳ್ಳ, ಕೆ.ಎನ್ ರಾಮಕೃಷ್ಣ ಹೊಳ್ಳ, ಕೆ.ವಿ ಶ್ರಿನಿವಾಸ ಹೊಳ್ಳ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ಗಣಪತಿ ಹವನ, ಪಂಚಾಮೃತಾಬಿಷೇಕ ಹಾಗೂ ವಿವಿಧ ಸೇವೆಗಳು, ಭಜನೆ, ಕೀರ್ತಿಶೇಷ ಮಧೂರು ಪದ್ಮನಾಭ ಸರಳಾಯ ಅವರ ಶಿಷ್ಯಂದಿರಾದ ವಿದುಷಿ ಮಂಜುಳಾ ಮೃಣಾಳಿನಿ ಮತ್ತು ವಿದ್ವಾನ್ ಎಲ್. ಅನಂತಪದ್ಮನಾಭ ಅವರಿಂದ ದ್ವಂದ್ವ ಪಿಟೀಲು ವಾದನ, ಮಧೂರು ಉಳಿಯ ಶ್ರೀ ಧನ್ವಂತರೀ ಯಕ್ಷಗಾನ ಕಲಾಸಂಘದಿಂದ ಯಕ್ಷಗಾನ ತಾಳಮದ್ದಳೆ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಶ್ರೀವೆಂಕಟ್ರಮಣ ದೇವರಿಗೆ ವಿಶೇಷ ಪೂಜೆ, ವಿಶೇಷ ಹೂವಿನ ಪೂಜೆ, ರಂಗಪೂಜೆ ನಡೆಯಿತು.