ಮಂಜೇಶ್ವರ: ಮೀಯಪದವು ವಿದ್ಯಾವರ್ಧಕ ಎ.ಯು.ಪಿ ಶಾಲೆಯಲ್ಲಿ ೨೯ ವರ್ಷಗಳ ಕಾಲ ಆಧ್ಯಾಪಕರಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಹೊಂದಿದ ನಾರಾಯಣ ನಾವಡರಿಗೆ ಶಾಲೆಯ ವತಿಯಿಂದ ವಿದಾಯಕೂಟ ಕಾರ್ಯಕ್ರಮ ಶಾಲಾ ಯಂ. ರಾಮಕೃಷ್ಣ ರಾವ್ ಸಭಾಂಗಣದಲ್ಲಿ ಜರಗಿತು. ಮುಖ್ಯಶಿಕ್ಷಕÀ ಅರವಿಂದಾಕ್ಷ ಭಂಡಾರಿ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಕುಬಣೂರು ಶ್ರೀರಾಮ ಎ.ಯು.ಪಿ ಶಾಲೆಯ ಸಂಚಾಲಕ ಬಾಲಕೃಷ್ಣ ಶೆಟ್ಟಿ ಅಭಿನಂದನಾ ಭಾಷಣಗೈದರು. ಶಾಲಾ ಆಡಳಿತ ಸಲಹೆಗಾರ ಶ್ರೀಧರ್ ರಾವ್ ಆರ್.ಎಂ, ಅಧ್ಯಾಪಕರಾದ ಬಾಲಕೃಷ್ಣ.ಎಂ, ಸೌಮ್ಯ.ಎನ್, ಕೃಷ್ಣ ಶರ್ಮ.ಕೆ, ಮಹಾಬಲೇಶ್ವರ ಭಟ್, ಸುನಿಲ್ ಕುಮಾರ್. ಎಂ, ವಿಘ್ನೇಶ್.ಎಸ್, ಶುಭ.ಪಿ ಹಾಗೂ ಸುಶಾಂತ್ ಮಯ್ಯ ನಿವೃತ್ತರ ಮುಂದಿನ ಜೀವನಕ್ಕೆ ಶುಭ ಹಾರೈಸಿದರು. ಶಾಲಾ ವತಿಯಿಂದ ನಿವೃತ್ತರನ್ನು ಗೌರವಿಸಲಾಯಿತು. ನಿವೃತ್ತರ ಪರಿಚಯವನ್ನು ಶಾಲಾ ಅಧ್ಯಾಪಕ ಹರೀಶ್ ಸುಲಾಯ ವಾಚಿಸಿದರು. ಇದೇ ಸಂದರ್ಭದಲ್ಲಿ ನಾರಾಯಣ ನಾವಡರು ರಚಿಸಿದ ವಿದ್ಯಾವರ್ಧಕ ಮಕ್ಕಳ ತಾಳಮದ್ದಳೆ ತಂಡದವರು ಅವರನ್ನು ಗೌರವಿಸಿದರು. ಒಂದು ವರ್ಷ ಶ್ರೀರಾಮ ಎ ಯು ಪಿ ಶಾಲೆ ಕುಬಣೂರಿನಲ್ಲಿ ಅಧ್ಯಾಪನ ಸೇವೆಗೈದ ನಾರಾಯಣ ನಾವಡರನ್ನು ನೆನಪಿಗಾಗಿ ಆ ಶಾಲೆಯ ಸಂಚಾಲಕ ಬಾಲಕೃಷ್ಣ ಶೆಟ್ಟಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕಿ ರಾಜೇಶ್ವರಿ ಎಸ್ ರಾವ್, ಶಾಲಾ ಪಿ ಟಿ ಎ ಅಧ್ಯಕ್ಷ ಸನತ್ ಕುಮಾರ್ ಹಾಗೂ ಎಂ.ಪಿ.ಟಿ.ಎ ಅಧ್ಯಕ್ಷೆ ಸ್ವಾತಿ ಉಪಸ್ಥಿತರಿದ್ದರು. ಅಧ್ಯಾಪಕರಾದ ರಾಮಚಂದ್ರ.ಕೆ.ಎA ನಿರೂಪಿಸಿ, ರಘುವೀರ ರಾವ್ ವಂದಿಸಿದರು.