ಕಾಸರಗೋಡು: ಬಾಂಗ್ಲಾ ದೇಶದಲ್ಲಿ ನಡೆದ ದಂಗೆಯ ಹಿನ್ನಲೆಯಲ್ಲಿ ಅಲ್ಲಿನ ಅಮಾಯಕ ಅಲ್ಪಸಂಖ್ಯಾತ ಹಿಂದೂ ಜನತೆಯ ಮೇಲೆ ನಡೆಸಿರುವ ದೌರ್ಜನ್ಯ ಮತ್ತು ಆಕ್ರಮಣ ಖಂಡನೀಯ ಹಾಗೂ ಭಯಾನಕವಾಗಿದ್ದು, ಸಮಸ್ತ ವಿಶ್ವವೇ ಇದರ ವಿರುದ್ಧ ಧ್ವನಿ ಎತ್ತಬೇಗಿದೆಯೆಂದು ಭಾರತೀಯ ರಾಜ್ಯ ಪೆನ್ಷರ್ಸ್ ಮಹಾಸಂಘ ತಿಳಿಸಿದೆ.
ಸಂಘದ ಕಾಸರಗೋಡು ಜಿಲ್ಲಾ ಸಮಿತಿ ಸಭೆಯಲ್ಲಿ ಜಿಲ್ಲಾಧ್ಯಕ್ಷ ಎಂ. ಬಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಸಂಘದ ದೇಶೀಯ ಅಧ್ಯಕ್ಷ ಸಿ. ಎಚ್. ಸುರೇಶ್ ಸಂಘದ ಕಾರ್ಯಗಳ ಬಗ್ಗೆ ವಿವರಿಸಿದರು. ಕೇರಳದ ವಯನಾಡಿನಲ್ಲಿ ನಡೆದ ದುರಂತದ ಬಗ್ಗೆ ವಿಷಾದ ವ್ಯಕ್ತಪಡಿಸಿ, ದುರಂತದಲ್ಲಿ ಮಡಿದವರಿಗೆ ಸಂತಾಪ ಸೂಚಿಸಲಾಯಿತು.
ಸಂಘದ ದೇಶೀಯ ಕೋಶಾಧಿಕಾರಿ ಕೆ. ದಯಾನಂದ, ಉಪಾಧ್ಯಕ್ಷೆ ಉಮಾದೇವಿ, ಜಿಲ್ಲಾ ಸಮಿತಿ ಸದಸ್ಯರಾದ ಬಾಲಚಂದ್ರ, ಚಂದ್ರು, ಬೇಬಿ ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ಸಿ. ಎಚ್. ಜಯೇಂದ್ರ ಸ್ವಾಗತಿಸಿದರು. ಮುರಳಿಧರನ್ ವಂದಿಸಿದರು.