HEALTH TIPS

ಶಬರಿಮಲೆಯ ಮಾಜಿ ಅರ್ಚಕ ಬ್ರಹ್ಮಶ್ರೀ ರಾಧಾಕೃಷ್ಣ ಕಡಮಣ್ಣಾಯ ನಿಧನ

             ಕುಂಬಳೆ:  ಶಬರಿಮಲೆ ಮಾಜಿ ಮುಖ್ಯ ಅರ್ಚಕ(ಮೇಲ್ಶಾಂತಿ) ಕುಂಬಳೆ ಶೇಡಿಕಾವು ನಿವಾಸಿ, ಬ್ರಹ್ಮಶ್ರೀ ರಾಧಾಕೃಷ್ಣ ಕಡಮಣ್ಣಾಯ(85)ಶನಿವಾರ ಉಪ್ಪಳದ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು. ಇವರು ದಿವಂಗತ ಸುಬ್ರಾಯ ಕಡಮಣ್ಣಾಯ-ಲಕ್ಷ್ಮೀಅಮ್ಮ ದಂಪತಿ ಪುತ್ರ.

             ಶಬರಿಮಲೆ ಶ್ರೀ ಅಯ್ಯಪ್ಪ ದೇಗುಲದಲ್ಲಿ 1992-93ರ ಅವಧಿಯಲ್ಲಿ ಮೇಲ್ಶಾಂತಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಬ್ರಹ್ಮಶ್ರೀ ರಾಧಾಕೃಷ್ಣ ಕಡಮಣ್ಣಾಯ ಅವರು ಅಲಪ್ಪುಳ ತುರವೂರ್ ನರಸಿಂಹ ಸ್ವಾಮಿ ದೇವಸ್ಥಾನದ ಮೇಲ್ಶಾಂತಿಯಾಗಿ ಹಾಗೂ ಕುಂಬಳೆ ಪ್ರದೇಶದ ವಿವಿಧ ದೇವಾಲಯಗಳಲ್ಲಿ ತಂತ್ರಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದರು.  ಇವರು ಅವಿವಾಹಿತರಾಗಿದ್ದರು.   



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries