ಕುಂಬಳೆ: ಕುಂಬಳೆಯ ಮಹಾತ್ಮ ಕಾಲೇಜಿನಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಕೆ.ಎಂ. ಸತ್ತಾರ್ ಧ್ವಜಾರೋಹಣಗೈದರು. ಸಹ ಪ್ರಾಂಶುಪಾಲ ಅಬ್ದುಲ್ ಲತೀಫ್ ಉಳುವಾರ್ ಅಧ್ಯಕ್ಷತೆ ವಹಿಸಿದ್ದರು. ಆಂಗ್ಲ, ಕನ್ನಡ, ಬ್ಯಾರಿ ಭಾಷಾ ಲೇಖಕಿ ಹಾಗೂ ಆಂಗ್ಲ ವಿಭಾಗದ ಶಿಕ್ಷಕಿ ಶಮೀಮಾ ಕುತ್ತಾರ್ ಮುಖ್ಯ ಭಾಷಣ ಮಾಡಿದರು. ಶಿಕ್ಷಕಿ ಹಂಸನಾ, ವಿದ್ಯಾರ್ಥಿಗಳಾದ ಇಸ್ಮಾಯಿಲ್ ಸಾಬಿ, ಅಫ್ರಾ ಪಿ.ಬಿ. ಹಾಗೂ ವಿದ್ಯಾರ್ಥಿನಿ ಭೂಮಿಕಾ ಮಾತನಾಡಿದರು. ವಿದ್ಯಾರ್ಥಿಗಳಿಗಾಗಿ ದೇಶಭಕ್ತಿಗೀತೆ, ಭಾಷಣ ಮುಂತಾದ ಸ್ಪರ್ಧೆಗಳನ್ನೂ ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳಾದ ಗ್ರೀಷ್ಮಾ ಸ್ವಾಗತಿಸಿ, ಫಜಲ್ ಕರೀಂ ವಂದಿಸಿದರು.