HEALTH TIPS

ಇವರೇ ನೋಡಿ ʻಭಾರತೀಯ ರಸಾಯನಶಾಸ್ತ್ರದ ಪಿತಾಮಹʼ!ಸೌಲಭ್ಯಗಳ ಕೊರತೆ ನಡುವೆಯೂ ಇವರ ಸಾಧನೆ ಅಪಾರ

 ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡಿದ ಅನೇಕ ಪ್ರತಿಭಾವಂತರನ್ನು ಭಾರತ (India) ಹೊಂದಿದೆ. ಭಾರತದ ಸ್ವಾತಂತ್ರ್ಯದ ಮೊದಲು ಈಗ ಇದ್ದ ಹಾಗೇ ಆಧುನಿಕ ಸೌಲಭ್ಯಗಳು ಇರಲಿಲ್ಲ. ಸೌಲಭ್ಯಗಳ ಕೊರತೆಯನ್ನು ಪರಿಗಣಿಸದೇ ಕೂಡ ದೇಶಕ್ಕೆ ತಮ್ಮಿಂದ ಏನ್‌ ಸಾಧ್ಯವೋ ಅದನ್ನು ಗಣ್ಯ ವ್ಯಕ್ತಿಗಳು ನೀಡಿದ್ದಾರೆ.

ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಆಗಿನಿಂದಲೂ ಅನ್ವೇಷಣೆಗಳು, ಮೈಲಿಗಲ್ಲುಗಳು ನಡೆಯುತ್ತಲೇ ಇವೆ. ಕಡಿಮೆ ಸೌಲಭ್ಯಗಳನ್ನು ಹೊಂದಿದ್ದರೂ, ಅವರು ಸಾಧಿಸಿದ್ದು ಮಾತ್ರ ಬೆಟ್ಟದಷ್ಟು. ಅನೇಕ ಮೊದಲುಗಳಿಗೆ ಇವರು ಬುನಾದಿ ಹಾಕಿದ್ದಾರೆ.

ಆಚಾರ್ಯ ಪ್ರಫುಲ್ಲ ಚಂದ್ರ ರೇ

ಅಂತಹ ವ್ಯಕ್ತಿಗಳಲ್ಲಿ ಒಬ್ಬರು ಆಚಾರ್ಯ ಪ್ರಫುಲ್ಲ ಚಂದ್ರ ರೇ. ಭಾರತೀಯ ವಿಜ್ಞಾನಿ ಮತ್ತು ಶಿಕ್ಷಣತಜ್ಞರಾಗಿದ್ದ ಇವರು, ಭಾರತದಲ್ಲಿನ ಆರಂಭಿಕ ಆಧುನಿಕ ರಾಸಾಯನಿಕ ಸಂಶೋಧಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.

ಭಾರತೀಯ ರಸಾಯನಶಾಸ್ತ್ರದ ಪಿತಾಮಹ

ಇತ್ತೀಚೆಗೆ, ಆಗಸ್ಟ್ 2 ರಂದು ಅವರ ಜನ್ಮದಿನವನ್ನು ಸ್ಮರಿಸಲಾಯಿತು. ರೇ ಅವರು ರಸಾಯನಶಾಸ್ತ್ರದಲ್ಲಿ ಮೊದಲ ಆಧುನಿಕ ಭಾರತೀಯ ಸಂಶೋಧನಾ ಶಾಲೆಯನ್ನು ಸ್ಥಾಪಿಸಿದರು ಮತ್ತು ಭಾರತೀಯ ರಸಾಯನಶಾಸ್ತ್ರದ ಪಿತಾಮಹ ಎಂದೇ ಇವರನ್ನು ಕರೆಯಲಾಗುತ್ತದೆ. ಪ್ರಫುಲ್ಲ ಅವರು 1901 ರಲ್ಲಿ ಭಾರತದ ಮೊದಲ ಔಷಧೀಯ ಕಂಪನಿಯಾದ ಬೆಂಗಾಲ್ ಕೆಮಿಕಲ್ಸ್ ಮತ್ತು ಫಾರ್ಮಾಸ್ಯುಟಿಕಲ್ಸ್ ಅನ್ನು ಸ್ಥಾಪಿಸಿದರು. ಈ ರೀತಿಯ ಉದಾತ್ತ ಕೆಲಸದ ನಿಮಿತ್ತವೇ ಇವರಿಗೆ ಫಾದರ್‌ ಆಫ್‌ ಇಂಡಿಯನ್‌ ಕೆಮಿಸ್ಟ್ರಿ ಎಂಬ ಗೌರವ ನೀಡಿ ಉಲ್ಲೇಖಿಸಲಾಗುತ್ತದೆ.

ಜನನ ಮತ್ತು ಶಿಕ್ಷಣ

ಆಚಾರ್ಯ ಪ್ರಫುಲ್ಲ ಚಂದ್ರ ರೇ, 1861 ರಲ್ಲಿ ಬೆಂಗಾಲ್ ಪ್ರೆಸಿಡೆನ್ಸಿಯಲ್ಲಿ ಜನಿಸಿದರು. ಶಿಕ್ಷಣಕ್ಕೆ ಆದ್ಯತೆ ನೀಡಿದ ಇವರು 1881 ರಲ್ಲಿ ಎಫ್‌ಎ ಪರೀಕ್ಷೆಯಲ್ಲಿ ಉತ್ತೀರ್ಣರಾದರು ಮತ್ತು ಕಲ್ಕತ್ತಾ ವಿಶ್ವವಿದ್ಯಾಲಯದ ಬಿಎ ಪದವಿಗೆ ರಸಾಯನಶಾಸ್ತ್ರ ವಿದ್ಯಾರ್ಥಿಯಾಗಿ ಪ್ರವೇಶ ಪಡೆದರು.

1882ರಲ್ಲಿ, ಅವರು 21ನೇ ವಯಸ್ಸಿನಲ್ಲಿ ಯುಕೆಗೆ ತೆರಳಿದರು. ಅಲ್ಲಿ ಅವರು ವಿದ್ಯಾರ್ಥಿವೇತನವನ್ನು ಪಡೆದುಕೊಂಡು ಅದರ ಸಹಾಯದಿಂದ BSc ಪದವಿಗೆ ಸೇರಿಕೊಂಡರು.

ಪ್ರಫುಲ್ಲ ಚಂದ್ರ ರೇ ಸಾಧನೆ

-1895ರಲ್ಲಿ ಸ್ಥಿರ ಸಂಯುಕ್ತವಾದ ಮರ್ಕ್ಯುರಸ್ ನೈಟ್ರೈಟ್ ಅನ್ನು ಕಂಡುಹಿಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.

-ಕಟ್ಟಾ ರಾಷ್ಟ್ರೀಯತಾವಾದಿ, ರೇ ಬಂಗಾಳಿ ಉದ್ಯಮವನ್ನು ಮುನ್ನಡೆಸಲು ಬದ್ಧರಾಗಿದ್ದರು ಮತ್ತು 1901ರಲ್ಲಿ ಬೆಂಗಾಲ್ ಕೆಮಿಕಲ್ ಮತ್ತು ಫಾರ್ಮಾಸ್ಯುಟಿಕಲ್ ವರ್ಕ್ಸ್ ಅನ್ನು ಸ್ಥಾಪಿಸಿದರು.

-ರೇ 1905ರ ಸ್ವದೇಶಿ ಚಳವಳಿಯ ಸಕ್ರಿಯ ಬೆಂಬಲಿಗರಾಗಿದ್ದರು.

-ಪ್ರಫುಲ್ಲ ಚಂದ್ರ ರೇ ಜಾತಿ ವ್ಯವಸ್ಥೆ ಮತ್ತು ಇತರ ಅಭಾಗಲಬ್ಧ ಸಾಮಾಜಿಕ ಆಚರಣೆಗಳನ್ನು ವಿರೋಧಿಸಿದರು ಮತ್ತು ಕೊನೆ ಉಸಿರಿನವರೆಗೆ ಸಾಮಾಜಿಕ ಸುಧಾರಣೆಯನ್ನು ಸಕ್ರಿಯವಾಗಿ ಉತ್ತೇಜಿಸಿದರು.

-ಎಡಿನ್‌ಬರ್ಗ್ ವಿಶ್ವವಿದ್ಯಾನಿಲಯದಲ್ಲಿ ತರಬೇತಿ ಪಡೆದ ರೇ ಅವರು ಪ್ರೆಸಿಡೆನ್ಸಿ ಕಾಲೇಜು ಮತ್ತು ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದರು.

-1888 ರಲ್ಲಿ ಭಾರತಕ್ಕೆ ಹಿಂದಿರುಗಿದ ಇವರು, ಪ್ರೆಸಿಡೆನ್ಸಿ ಕಾಲೇಜಿಗೆ ಪ್ರಾಧ್ಯಾಪಕರಾಗಿ ಸೇರಿಕೊಂಡರು 1889 ರವರೆಗೆ ರಸಾಯನಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾಗಿ ವಿದ್ಯಾರ್ಥಿಗಳಿಗೆ ತಮ್ಮ ಜ್ಞಾನವನ್ನು ಹಂಚಿದರು.

ಪ್ರಶಸ್ತಿಗಳು ಮತ್ತು ಪುರಸ್ಕಾರ

* ಎಡಿನ್‌ಬರ್ಗ್ ವಿಶ್ವವಿದ್ಯಾನಿಲಯದಲ್ಲಿ ತರಬೇತಿ ಪಡೆದ ಇವರು ಬ್ರಿಟಿಷ್ ಸರ್ಕಾರದಿಂದ ಗೌರವಿಸಲ್ಪಟ್ಟರು ಮತ್ತು ಕಂಪ್ಯಾನಿಯನ್ ಆಫ್ ಇಂಡಿಯನ್ ಎಂಪೈರ್ (CIE) ಎಂಬ ಬಿರುದನ್ನು ಪಡೆದರು ಮತ್ತು ನಂತರ 1919 ರಲ್ಲಿ ನೈಟ್‌ಹುಡ್ ಪಡೆದರು.

* 1920ರಲ್ಲಿ, ಅವರು ಭಾರತೀಯ ವಿಜ್ಞಾನ ಕಾಂಗ್ರೆಸ್‌ನ ಜನರಲ್ ಅಧ್ಯಕ್ಷರಾಗಿ ಆಯ್ಕೆಯಾದರು.

* ರೇ ಅವರ ಕೊಡುಗೆಗಳನ್ನು ಗುರುತಿಸಿ, ಇಂಡಿಯಾ ಪೋಸ್ಟ್ ಆಗಸ್ಟ್ 2, 1961 ರಂದು ಅವರ ಜನ್ಮ ವಾರ್ಷಿಕೋತ್ಸವವನ್ನು ಗುರುತಿಸಿ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತು.

* ಇವರು ತಮ್ಮ ಜೀವಿತಾವಧಿಯಲ್ಲಿ ಸುಮಾರು 150 ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದರು. ಅವರು 1936ರಲ್ಲಿ 75 ನೇ ವಯಸ್ಸಿನಲ್ಲಿ ನಿವೃತ್ತರಾದರು.

* ಪ್ರಫುಲ್ಲ ಚಂದ್ರ ರೇ ಜೂನ್ 1944 ರಲ್ಲಿ ತಮ್ಮ 82 ನೇ ವಯಸ್ಸಿನಲ್ಲಿ ನಿಧನರಾದರು.


Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries