ಉಪ್ಪಳ: ಮುಳಿಂಜ ಜಿ.ಎಲ್.ಪಿ ಶಾಲೆಯಲ್ಲಿ ಆಧುನಿಕ ಸಂವಿಧಾನವನ್ನು ಬಳಸಿಕೊಂಡು ವಿನೂತನವಾಗಿ ಶಾಲಾ ಚುನಾವಣೆ ನಡೆಯಿತು. ನಾಮಪತ್ರ ಸಲ್ಲಿಕೆಯಿಂದ ಆರಂಭಿಸಿ ಚುನಾವಣಾ ಪ್ರಚಾರ ಚುನಾವಣಾ ಫಲಿತಾಂಶದವರೆಗೆ ನಡೆದ ಚುನಾವಣೆಯಲ್ಲಿ ವಿದ್ಯಾರ್ಥಿಗಳು ಹುರುಪಿನಿಂದ ಭಾಗವಹಿಸಿದರು. ಬ್ಯಾಟ್ ಮತ್ತು ಬಾಲ್ ಚಿಹ್ನೆ ಅಡಿಯಲ್ಲಿ ಸ್ಪರ್ಧಿಸಿದ ವಿದ್ಯಾರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಪ್ರತೀ ತರಗತಿಗೆ ತೆರಳಿ ಮತಯಾಚನೆ ನಡೆಸಿದರು. ಆಧುನಿಕ ತಂತ್ರಜ್ಞಾನ ಬಳಸಿ ಕಂಪ್ಯೂಟರೀಕೃತ ಚುನಾವಣೆಯು ಸಮಾಟಿ ಆಪ್‍ನ ಮೂಲಕ ಶಿಕ್ಷಕ ಅಬ್ದುಲ್ ಬಶೀರ್ ನಡೆಸಿಕೊಟ್ಟರು. ವಿಶೇಷ ಸಾಮಥ್ರ್ಯದ ವಿದ್ಯಾರ್ಥಿಗಳು ಕೂಡಾ ಮತ ಚಲಾವಣೆ ಮಾಡಿ ಚುನಾವಣೆಯ ಮೆರುಗು ಹೆಚ್ಚಿಸಿತು. ಜೊತೆಗೆ ಮತದಾನ ಮಾಡುವುದು ನಮ್ಮ ಹಕ್ಕು ಎಂಬುದನ್ನು ತಿಳಿಸಿ ಕೊಟ್ಟಿತು.
ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಫಲಿತಾಂಶ ಪ್ರಕಟಿಸಿದರು. ಶಾಲಾ ನಾಯಕಿಯಾಗಿ ಆಯ್ಕೆಯಾದ ಆಯಿಶತ್ ಶಿಬ್ಲ ಪ್ರಧಾನ ಮಂತ್ರಿಯಾದರೆ ಮೊಹಮ್ಮದ್ ಅಲ್ ಅಮೀನ್ ಹವ್ವಾ ಹನ್ಸ ಮಾಲಾ ಲಮಾಣಿ ಕ್ರೀಡಾಮಂತ್ರಿ, ವಿದ್ಯಾಭ್ಯಾಸ ಮಂತ್ರಿ, ಆರೋಗ್ಯ ಮಂತ್ರಿ, ಕಲಾ ಮಂತ್ರಿಗಳನ್ನು ನೇಮಕಗೊಳಿಸಲಾಯಿತು. ಶಿಕ್ಷಕಿ ಅನಿತ ಪ್ರತಾಪನಗರ ಹಾಗೂ ಕಾವ್ಯಾಂಜಲಿ ಪ್ರತಾಪನಗರ ನೂತನ ಮಂತ್ರಿಗಳಿಗೆ ಅವರವರ ಜವಾಬ್ದಾರಿ ತಿಳಿಸಿಕೊಟ್ಟರು. ಫಾತಿಮತ್ ಫಜೀನ ಚುನಾವಣೆಯ ನೇತೃತ್ವ ವಹಿಸಿದ್ದರು. ರಿಯಾಸ್ ಎಂ.ಎಸ್ ಪೆರಿಂಗಡಿ ಹಾಗೂ ಶಿಕ್ಷಕಿ ಧನ್ಯ ಸಹಕರಿಸಿದರು.