HEALTH TIPS

ಜನಸಂಖ್ಯಾ ಬದಲಾವಣೆಯಿಂದ ಭಾರತ ಅಂತರ್ಯುದ್ಧ ಎದುರಿಸಲಿದೆ: ಕೈಲಾಶ್ ವಿಜಯವರ್ಗಿಯ

 ಇಂದೋರ್: ಬೃಹತ್ ಪ್ರಮಾಣದಲ್ಲಿ ಜನಸಂಖ್ಯೆ ಹೆಚ್ಚಳ ಮತ್ತು ಜನಸಂಖ್ಯಾ ಸ್ವರೂಪದಲ್ಲಿ ಆಗುತ್ತಿರುವ ಬದಲಾವಣೆಯಿಂದಾಗಿ ಭಾರತವು ಮುಂದಿನ 30 ವರ್ಷಗಳಲ್ಲಿ ಅಂತರ್ಯುದ್ಧವನ್ನು ಎದುರಿಸಬಹುದು ಎಂದು ಮಧ್ಯಪ್ರದೇಶದ ಸಚಿವ ಕೈಲಾಶ್ ವಿಜಯವರ್ಗಿಯ ಹೇಳಿದ್ದಾರೆ.

ರಕ್ಷಾ ಬಂಧನ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ವಿಜಯವರ್ಗಿಯ, 'ಪ್ರಸ್ತುತ ಸಮಾಜದಲ್ಲಿ ಸೌಹಾರ್ದತೆ ಬಹುಮುಖ್ಯವಾಗಿದೆ.

ನಮ್ಮ ದೇಶದ ಜನಸಂಖ್ಯಾ ಸ್ವರೂಪದಲ್ಲಿ ಬದಲಾವಣೆ ಆಗುತ್ತಿದೆ. ಇದು ಹೀಗೆ ಮುಂದುವರಿದರೆ ಮುಂದಿನ 30 ವರ್ಷಗಳಲ್ಲಿ ಅಂತರ್ಯುದ್ಧ ಆರಂಭವಾಗಬಹುದು, ಜನರು ಬದುಕಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾದರೂ ಅಚ್ಚರಿ ಇಲ್ಲ' ಎಂದು ಹೇಳಿದ್ದಾರೆ.

'ಜನಸಂಖ್ಯಾ ಸ್ವರೂಪದಲ್ಲಿ ಆಗುತ್ತಿರುವ ಬದಲಾವಣೆಯ ಬಗ್ಗೆ ಎಲ್ಲರೂ ಆಲೋಚಿಸಬೇಕಿದೆ. ಜತೆಗೆ, ಹಿಂದೂ ಧರ್ಮವನ್ನು ಹೇಗೆ ಬಲಪಡಿಸಬೇಕೆಂಬ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸೋಣ. ಕೆಲವರು ಹಿಂದೂಗಳನ್ನು ಜಾತಿಯ ಆಧಾರದ ಮೇಲೆ ವಿಭಜಿಸಲು ಬಯಸುತ್ತಾರೆ. ಹಾಗೆಯೇ 'ಒಡೆದು ಆಳುವ' ಬ್ರಿಟಿಷ್ ನೀತಿಯನ್ನು ಬಳಸಿಕೊಂಡು ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಾರೆ' ಎಂದು ಅವರು ಪ್ರತಿಪಾದಿಸಿದ್ದಾರೆ.

ಕೈಲಾಶ್ ವಿಜಯವರ್ಗಿಯ ಅವರ ಹೇಳಿಕೆಯು ರಾಜಕೀಯ ವಲಯದಲ್ಲಿ ವಿವಾದವನ್ನು ಹುಟ್ಟುಹಾಕಿದೆ. ಪ್ರತಿಪಕ್ಷ ಕಾಂಗ್ರೆಸ್ ವಿಜಯವರ್ಗಿಯ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದು, ಬೇಜವಾಬ್ದಾರಿ ಹೇಳಿಕೆ ನೀಡಿರುವ ವಿಜಯವರ್ಗಿಯ ತಕ್ಷಣವೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದೆ.

'ವಿಜಯವರ್ಗಿಯ ಅವರ ಹೇಳಿಕೆಯು ಸಂಪೂರ್ಣ ಬೇಜವಾಬ್ದಾರಿಯಾಗಿದೆ. ಇದರಿಂದ ದೇಶದಲ್ಲಿ ಅಸ್ಥಿರತೆ ಮತ್ತು ಭಯದ ವಾತಾವರಣವನ್ನು ಸೃಷ್ಟಿಯಾಗಲಿದೆ. ಜತೆಗೆ, ಶಾಂತಿ ಮತ್ತು ಸಹೋದರತ್ವದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಹಾಗಾಗಿ ಅವರು ತಕ್ಷಣವೇ ಕ್ಷಮೆಯಾಚಿಸಬೇಕು' ಎಂದು ಕಾಂಗ್ರೆಸ್ ವಕ್ತಾರ ನೀಲಭ್ ಶುಕ್ಲಾ ಆಗ್ರಹಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries