ಕಾಸರಗೋಡು: ವಯನಾಡಿನ ಸಂತ್ರಸ್ತರಿಗಾಗಿ ಕಾಸರಗೋಡು ಪ್ರೆಸ್ ಕ್ಲಬ್ ನೆರವಿನ ಹಸ್ತ ಚಾಚಿದೆ. ಸಂತ್ರಸ್ತರ ಪುನರ್ವಸತಿ ಪ್ಯಾಕೇಜ್‍ಗಾಗಿ ಪ್ರೆಸ್ ಕ್ಲಬ್ ಸಂಗ್ರಹಿಸಿರುವ 2,30,000 ರೂ. ಮೊತ್ತವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಸ್ತಾಂತರಿಸಲಾಯಿತು. ತಿರುವನಂತಪುರದಲ್ಲಿ ಕಾಸರಗೋಡು ಪ್ರೆಸ್ ಕ್ಲಬ್ ಅಧ್ಯಕ್ಷ ಮುಹಮ್ಮದ್ ಹಾಶಿಮ್ ಹಾಗೂ ಕಾರ್ಯದರ್ಶಿ ಕೆ.ವಿ.ಪದ್ಮೇಶ್ ಮುಖ್ಯಮಂತ್ರಿಗಳಿಗೆ ಮೊತ್ತದ ಡಿಡಿಯನ್ನು ಹಸ್ತಾಂತರಿಸಿದರು.
ವಯನಾಡಿನ ಸಂತ್ರಸ್ತರ ಪುನರ್ವಸತಿಗಾಗಿ ಕಾಸರಗೋಡು ಪ್ರೆಸ್ ಕ್ಲಬ್ ಸಂಗ್ರಹಿಸಿದ ಮೊತ್ತವನ್ನು ಸಿಎಂ ಪಿಣರಾಯಿ ವಿಜಯನ್ ಅವರಿಗೆ ಅಧ್ಯಕ್ಷ ಮಹಮ್ಮದ್ ಹಾಶಿಮ್ ಮತ್ತು ಕಾರ್ಯದರ್ಶಿ ಕೆ.ವಿ.ಪದ್ಮೇಶ್ ಹಸ್ತಾಂತರಿಸಿದರು.