ವೈದ್ಯಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ ಶ್ವಾಸಕೋಶದ ಕ್ಯಾನ್ಸರ್‌ಗೆ ಲಸಿಕೆಯನ್ನು ಕಂಡುಹಿಡಿಯಲಾಗಿದೆ. ಶುಕ್ರವಾರ ಯುಕೆ ಮೂಲದ (ಯುನೈಟೆಡ್ ಕಿಂಗ್ಡಮ್ - ಇಂಗ್ಲೆಂಡ್) ಶ್ವಾಸಕೋಶದ ಕ್ಯಾನ್ಸರ್ ರೋಗಿಯ ಮೇಲೆ ಇದನ್ನು ಪರೀಕ್ಷಿಸಲಾಯಿತು. ಮೊಟ್ಟ ಮೊದಲ ಬಾರಿಗೆ, ಶ್ವಾಸಕೋಶದ ಕ್ಯಾನ್ಸರ್ ಲಸಿಕೆ ಪ್ರಯೋಗವನ್ನು ನಡೆಸಲಾಗುತ್ತಿದೆ ಮತ್ತು ಅದರ ಕಾರ್ಯಕ್ಷಮತೆಯನ್ನು ಕೋಟಿ ಕಂಗಳ ಭರವಸೆಯೊಂದಿಗೆ ಪರಿಶೀಲನೆ ಮಾಡಲಾಗುತ್ತಿದೆ.
ಇದು ಯಶಸ್ವಿಯಾದರೆ ಸಾವಿರಾರು ಜೀವಗಳನ್ನು ಉಳಿಸುವ ಸಾಮರ್ಥ್ಯವನ್ನು ಈ ಪರೀಕ್ಷೆ ಮೂಲಕ ಸಾಧಿಸಿದಂತಾಗುತ್ತದೆ. ಪ್ರಪಂಚದಲ್ಲಿ ಅತಿಹೆಚ್ಚು ಸಾವುಗಳಿಗೆ ಶ್ವಾಸಕೋಶದ ಕ್ಯಾನ್ಸರ್ ಪ್ರಮುಖ ಕಾರಣವಾಗಿದೆ. ಪ್ರತಿ ವರ್ಷ 1.8 ಮಿಲಿಯನ್ ಜನರು ಅದರಿಂದ ಸಾಯುತ್ತಾರೆ. BNT116 ಎಂಬ ಈ ರೋಗಕ್ಕೆ ಈಗಾಗಲೇ ಲಸಿಕೆಯನ್ನು ಕಂಡುಹಿಡಿಯಲಾಗಿದ್ದು ಇಂದು ಮೊದಲ ಬಾರಿಗೆ UK ಯಲ್ಲಿ ಶ್ವಾಸಕೋಶದ ಕ್ಯಾನ್ಸರ್ ರೋಗಿಯ ಮೇಲೆ ಲಸಿಕೆಯನ್ನು ಪ್ರಾಯೋಗಿಕವಾಗಿ ಬಳಸಲಾಯಿತು.
ಜಾನುಸ್ಜ್ ರಾಕ್ಜ್ ಜಾಬ್ ಎಂಬ 67 ವರ್ಷದ ರೋಗಿಗೆ ಆರು ಸಿರಿಂಜ್ ಲಸಿಕೆಗಳನ್ನು ನೀಡಿದರು. ಈ ಪ್ರತಿಯೊಂದು ಲಸಿಕೆಗಳು ಕ್ಯಾನ್ಸರ್ ಗೆಡ್ಡೆಗಳ ವಿಭಿನ್ನ ಉಪವಿಭಾಗಕ್ಕೆ ನಿರ್ದಿಷ್ಟವಾದ ಆನುವಂಶಿಕ ವಸ್ತುಗಳನ್ನು ಒಳಗೊಂಡಿರುತ್ತವೆ. ಈ ಲಸಿಕೆಗಳು ರೋಗಿಯ ಪ್ರತಿರಕ್ಷಣಾ ವ್ಯವಸ್ಥೆಯ ಐದು ಶತಕೋಟಿ ಜೀವಕೋಶಗಳ ಮೇಲೆ ದಾಳಿ ಮಾಡುವ ಸಾಮರ್ಥ್ಯವನ್ನು ಹೊಂದಿವೆ. ಈ ಲಸಿಕೆಯನ್ನು ಬಯೋಎನ್‌ಟೆಕ್ ಕಂಪನಿ ತಯಾರಿಸಿದೆ. BNT116 ಲಸಿಕೆಯನ್ನು ನಾನ್ – ಸ್ಮಾಲ್ ಸೆಲ್ ಲಂಗ್ ಕ್ಯಾನ್ಸರ್ (NSCLC) ಚಿಕಿತ್ಸೆಗಾಗಿ ಬಳಸಲಾಗುತ್ತಿದೆ, ಇದು ರೋಗದ ಅತ್ಯಂತ ಸಾಮಾನ್ಯ ರೂಪವಾಗಿದೆ.
ವೈದ್ಯರ ಪ್ರಕಾರ, ಈ ಪ್ರಾಯೋಗಿಕ ಲಸಿಕೆಯು ಯೂನಿವರ್ಸಿಟಿ ಕಾಲೇಜ್ ಲಂಡನ್ ಹಾಸ್ಪಿಟಲ್ – ಕಿಮೊಥೆರಪಿಗಿಂತ ಹೆಚ್ಚು ನಿಖರವಾಗಿ ಕೆಲಸ ಮಾಡುತ್ತದೆ ಎಂದು ವಿಶ್ವಾಸ ಹೊಂದಿದೆ. ಇದು ಆರೋಗ್ಯಕರ ಜೀವಕೋಶಗಳಿಗೆ ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ. ನೋವು ಇಲ್ಲದೆ ರೋಗವನ್ನು ತಡೆಯಬಹುದು. ಇದು ಕೀಮೋಗಿಂತ ಉತ್ತಮ ಚಿಕಿತ್ಸೆ ಎಂದು ಹೇಳಲಾಗುತ್ತದೆ. ತಜ್ಞರ ಪ್ರಕಾರ, mRNA ಲಸಿಕೆಯು ರೋಗಿಗಳ ದೇಹದಲ್ಲಿನ ಕ್ಯಾನ್ಸರ್ ಗೆಡ್ಡೆಗಳನ್ನು ಗುರುತಿಸಲು ಮತ್ತು ಹೋರಾಡಲು ರೋಗಿಗಳ ಪ್ರತಿರಕ್ಷಣಾ ವ್ಯವಸ್ಥೆಗಳಿಗೆ ತರಬೇತಿ ನೀಡುತ್ತದೆ. ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ನಿಗ್ರಹಿಸುವ ಜೀವಕೋಶಗಳನ್ನು ಪರಿಣಾಮಕಾರಿಯಾಗಿ ತೆಗೆದುಹಾಕಬಹುದು ಎಂದು ವೈದ್ಯರು ಹೇಳುತ್ತಾರೆ. ಈ ಲಸಿಕೆಯು ರೋಗಿಯ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು 12 ತಿಂಗಳುಗಳಲ್ಲಿ ಹಂತಹಂತವಾಗಿ ಚಿಕಿತ್ಸೆ ನೀಡಲಾಗುವುದು.
ನಾನ್-ಸ್ಮಾಲ್ ಸೆಲ್ ಲಸಿಕೆ ಪ್ರಯೋಗ ಯಶಸ್ವಿಯಾದರೆ, ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿರುವ ಸಾಕಷ್ಟು ಜನರಿಗೆ ಇದು ಪ್ರಯೋಜನವನ್ನು ನೀಡುತ್ತದೆ. ಲಸಿಕೆ ಪ್ರಯೋಗದಲ್ಲಿ ನಾನು ಮೊದಲ ಅಥವಾ ನೂರನೇ ವ್ಯಕ್ತಿಯಾಗಿದ್ದರೂ ಸರಿ ನಾನು ಹೆದರುವುದಿಲ್ಲ. ಇದು ನನಗೆ ಸಹಾಯ ಮಾಡುತ್ತದೆ ಎಂದು ನಾನು ನಂಬುತ್ತೇನೆ. ಈ ಪ್ರಯೋಗ ಯಶಸ್ವಿಯಾಗಿ ಲಸಿಕೆಯು ವೇಗವಾಗಿ ಉತ್ಪಾದನೆಗೆ ಹೋದರೆ, ಅದು ಇತರ ರೋಗಿಗಳ ಜೀವಗಳನ್ನು ಉಳಿಸಬಹುದು. COVID-19 ಲಸಿಕೆಗಳು ಲಕ್ಷಾಂತರ ಜನರಿಗೆ ಸಹಾಯ ಮಾಡಿದೆ. ಅದೇ ರೀತಿ ಇದು ಕೂಡಾ ಲಕ್ಷಾಂತರ ಜನರಿಗೆ ಸಹಾಯ ಮಾಡುತ್ತದೆ ಎಂದು ಮೊದಲ ಲಸಿಕೆ ಪ್ರಾಯೋಗಿಕವಾಗಿ ಪಡೆದ ಜಾನುಸ್ ರಾಕ್ಜ್‌ಗೆ ಜಬ್ ತಿಳಿಸಿದ್ದಾರೆ.
ನಾನ್ – ಸ್ಮಾಲ್ ಸೆಲ್ ಲಂಗ್ ಕ್ಯಾನ್ಸರ್ (NSCLC) ಎಂದರೇನು?
ನಾನ್ – ಸ್ಮಾಲ್ ಸೆಲ್ ಲಂಗ್ ಕ್ಯಾನ್ಸರ್ (NSCLC) ಶ್ವಾಸಕೋಶದ ಕ್ಯಾನ್ಸರ್ಗೆ ಸಂಬಂಧಿಸಿದ ಕಾಯಿಲೆಯಾಗಿದೆ. ಇದು ದೇಹದಲ್ಲಿ ಗೊತ್ತಿಲ್ಲದೆ ಒಳಗೊಳಗೇ ಬೆಳೆಯುತ್ತದೆ. ರೋಗ ಪತ್ತೆಯಾಗುವ ಹೊತ್ತಿಗೆ ಅದು ದೇಹದ ಇತರ ಭಾಗಗಳಿಗೂ ಹರಡಿರುತ್ತದೆ. ಆದ್ದರಿಂದ ಈ ರೋಗದ ಆರಂಭಿಕ ಪತ್ತೆ ಮತ್ತು ಚಿಕಿತ್ಸೆ ಅಗತ್ಯ. ಈ ರೋಗವು ಹೆಚ್ಚಾಗಿ ಧೂಮಪಾನದಿಂದ ಉಂಟಾಗುತ್ತದೆ. ಸೋಂಕಿಗೆ ಒಳಗಾದವರಲ್ಲಿ ಕಾಲು ಭಾಗದಷ್ಟು ಜನರು ಮಾತ್ರ ಐದು ವರ್ಷ ಬದುಕುತ್ತಾರೆ. ಕ್ಯಾನ್ಸರ್ ಕೋಶಗಳು ಮೆದುಳು, ಯಕೃತ್ತು, ಚರ್ಮ, ದುಗ್ಧರಸ ಗ್ರಂಥಿಗಳು ಮತ್ತು ಮೂತ್ರಜನಕಾಂಗದ ಗ್ರಂಥಿಗಳು ಸೇರಿದಂತೆ ರೋಗಿಯ ದೇಹದ ಇತರ ಭಾಗಗಳಿಗೆ ವೇಗವಾಗಿ ಹರಡುತ್ತವೆ. ಈ ಸ್ಥಿತಿಯನ್ನು ಮೆಟಾಸ್ಟಾಟಿಕ್ ನಾನ್-ಸ್ಮಾಲ್ ಸೆಲ್ ಲಂಗ್ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ. ದೀರ್ಘಕಾಲದ ಕೆಮ್ಮು, ಎದೆನೋವು, ಸುಸ್ತು ಮುಂತಾದ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ.