ಕಾಸರಗೋಡು: ರಾಷ್ಟ್ರೀಯ ನೇತ್ರದಾನ ಪಕ್ಷಾಚರಣೆಯ ಜಿಲ್ಲಾ ಮಟ್ಟದ ಉದ್ಘಾಟನೆ ಮತ್ತು ಜಾಗೃತಿ ವಿಚಾರ ಸಂಕಿರಣ ರಾಷ್ಟ್ರೀಯ ಆರೋಗ್ಯ ಮಿಷನ್‍ನ ಸಮ್ಮೇಳನ ಸಭಾಂಗಣದಲ್ಲಿ ಜರುಗಿತು. ಜಿಲ್ಲಾ ವೈದ್ಯಕೀಯ ಕಛೇರಿ (ಆರೋಗ್ಯ), ರಾಷ್ಟ್ರೀಯ ಆರೋಗ್ಯ ಮಿಷನ್ ಮತ್ತು ಜಿಲ್ಲಾ ಅಂಧತ್ವ ನಿವಾರಣಾ ಸಮಿತಿಯ ಜಂಟಿ ಮೇಲ್ವಿಚಾರಣೆಯಲ್ಲಿ ಕಾರ್ಯಕ್ರಮ ನಡೆಯಿತು.ಅಧಿಕಾರಿ (ಆರೋಗ್ಯ) ಡಾ.ಎ.ವಿ.ರಾಮದಾಸ್ ಸಮಾರಂಭ ಉದ್ಘಾಟಿಸಿದರು. ಜಿಲ್ಲಾ ಮಾಸ್ ಮೀಡಿಯಾ ಅಧಿಕಾರಿ ಅಬ್ದುಲ್ ಲತೀಫ ಮಠತ್ತಿಲ್, ಅಪರ ಜಿಲ್ಲಾ ಶಿಕ್ಷಣ ಮತ್ತು ಮಾಧ್ಯಮ ಅಧಿಕಾರಿ ಸಯನಾ ಎಸ್, ಹಿರಿಯ ನೇತ್ರತಜ್ಞ ಸುರೇಶ್ ಕುಮಾರ್, ಉಷಾಕುಮಾರಿ, ಜಿಲ್ಲೆಯ ಇತರ ನೇತ್ರ ತಜ್ಞರು ಮತ್ತು ಎಂಎಲ್‍ಎಸ್‍ಪಿ ಶುಶ್ರೂಷಕರು ಭಾಗವಹಿಸಿದ್ದರು.
ಜಿಲ್ಲಾ ಆಸ್ಪತ್ರೆ ಕಾಞಂಗಾಡ್ ನೇತ್ರ ತಜ್ಞ ಡಾ.ಎಸ್.ಅಪರ್ಣ್ ಮತ್ತು ನೀಲೇಶ್ವರಂ ತಾಲೂಕಾ ಆಸ್ಪತ್ರೆ ಆಪೆÇ್ಟೀಮೆಟ್ರಿಸ್ಟ್ ಅಜೀಶ್ ಕುಮಾರ್ ವಿಚಾರಸಂಕಿರಣ ನಡೆಸಿಕೊಟ್ಟರು.
ಒಬ್ಬ ವ್ಯಕ್ತಿಯ ಮರಣಾನಂತರ ನೇತ್ರದಾನ ಮಾಡಬಹುದಾಗಿದ್ದು, ಸಾವಿನ ನಾಲ್ಕರಿಂದ ಆರು ಗಂಟೆಗಳ ಒಳಗೆ, ಕಣ್ಣಿನ ಕಾರ್ನಿಯಾ ತೆರವುಗೊಳಿಸಿ ಕಣ್ಣಿನ ಬ್ಯಾಂಕ್‍ಗೆ ಸ್ಥಳಾಂತರಿಸಲಾಗುತ್ತದೆ. ಕನ್ನಡಕ ಹಾಕಿಕೊಂಡವರು ಹಾಗೂ ಕಣ್ಣಿನ ಪೆÇರೆ ಶಸ್ತ್ರಚಿಕಿತ್ಸೆಗೆ ಒಳಗಾದವರಿಗೂ ನೇತ್ರದಾನ ಮಾಡಬಹುದಾಗಿದೆ. ಲ್ಯುಕೇಮಿಯಾ, ಹೆಪಟೈಟಿಸ್ ಬಿ ಮತ್ತು ಸಿ ವೈರಸ್, ಏಡ್ಸ್, ರೇಬೀಸ್ ಬಾಧಿಸಿ ಸಾವಿಗೀಡಾದವರಿಗೆ ತಮ್ಮ ಕಣ್ಣುಗಳನ್ನು ದಾನ ಮಾಡಲು ಸಾಧ್ಯವಿಲ್ಲ. ಎಲ್ಲಾ ವಯಸ್ಸಿನ ಜನರು ನೇತ್ರದಾನಕ್ಕೆ ನೋಂದಾಯಿಸಿಕೊಳ್ಳಬಹುದು. ಇದು ಎಲ್ಲಾ ವೈದ್ಯಕೀಯ ಕಾಲೇಜುಗಳು, ಜಿಲ್ಲಾ ಆಸ್ಪತ್ರೆಗಳು, ತಾಲೂಕು ಆಸ್ಪತ್ರೆಗಳು ಮತ್ತು ಖಾಸಗಿ ಕಣ್ಣಿನ ಆಸ್ಪತ್ರೆಗಳಲ್ಲಿ ಲಭ್ಯವಿದೆ. ಪಕ್ಷಾಚರಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ವಿವಿಧ ಜಾಗೃತಿ ಕಾರ್ಯಕ್ರಮ ಹಾಗೂ ನೇತ್ರ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಡಾ.ಎ.ವಿ.ರಾಮದಾಸ್ ತಿಳಿಸಿದರು. ಆಗಸ್ಟ್ 25ಕ್ಕೆ ಆರಂಭಗೊಂಡಿರುವ ಅಭಿಯಾನ ಸೆಪ್ಟೆಂಬರ್ 8 ರವರೆಗೆ ನಡೆಯಲಿದೆ.