ಪೆರ್ಲ: ಎಣ್ಮಕಜೆ ಗ್ರಾ.ಪಂ ನ ಕೃಷಿ ಭವನದ ವತಿಯಿಂದ ಸಿಂಹ ಮಾಸ 1ನ್ನು ಕೃಷಿಕರ ದಿನಾಚರಣೆಯನ್ನಾಗಿ ಶನಿವಾರ ನಡೆಸಲಾಯಿತು. ಪಂಚಾಯತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್ ಉದ್ಘಾಟಿಸಿದರು. ಬಳಿಕ ಸಭೆಯನ್ನದ್ದೇಶಿಸಿ ಮಾತನಾಡಿದ ಅವರು, ಆಹಾರ, ಭಾಷೆ, ಸಂಸ್ಕಾರ ಇವು ಕೃಷಿಯೊಂದಿಗೆ ಅವಿನಾಭಾವದ ಸಂಬಂಧ ಹೊಂದಿದ್ದು ನಮ್ಮ ಪಾರಂಪರಿಕ ಕೃಷಿ ವಲಯನ್ನು ಆಧುನಿಕ ಕೃಷಿ ಪದ್ಧತಿಯೊಂದಿಗೆ ಜೋಡಿಸುವ ಜೊತೆಗೆ ಯುವ ಜನಾಂಗವನ್ನು ಕೃಷಿಯತ್ತ ಆಕರ್ಷಿಸಲು ಪ್ರಯತ್ನಿಸುವ ಕಾರ್ಯ ಶ್ಲಾಘನೀಯ ಎಂದರು.
ಗ್ರಾ.ಪಂ.ಉಪಾಧ್ಯಕ್ಷೆ ರಂಲ ಇಬ್ರಾಹಿಂ ಸಭೆಯ ಅಧ್ಯಕ್ಷತೆವಹಿಸಿದ್ದರು. ಜಿಲ್ಲಾ ಪಂ.ಸದಸ್ಯ ನಾರಾಯಣ ನಾಯ್ಕ್, ಬ್ಲಾಕ್ ಪಂ.ಸದಸ್ಯ ಬಟ್ಟು ಶೆಟ್ಟಿ ಕಾಟುಕುಕ್ಕೆ, ಕೆ.ಪಿ.ಅನಿಲ್ ಕುಮಾರ್, ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್, ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌಧಭಿ ಹನೀಫ್, ಪಂ.ಸದಸ್ಯರಾದ ರೂಪವಾಣಿ ಆರ್.ಭಟ್, ನರಸಿಂಹ ಪೂಜಾರಿ, ರಾಮಚಂದ್ರ ಎಂ, ಉಷಾ ಕುಮಾರಿ, ಆಶಾಲತಾ, ಸಿಡಿಎಸ್ ಅಧ್ಯಕ್ಷೆ ಜಲಜಾಕ್ಷಿ ಮಾತನಾಡಿದರು. ಈ ಸಂದರ್ಭದಲ್ಲಿ ಕೃಷಿಕರಾದ ಲೋಕನಾಥ ಶೆಟ್ಟಿ, ಕೃಷಿ ಕಾರ್ಮಿಕ ಕೃಷ್ಣ ಬೈರ, ಹಿರಿಯ ಕೃಷಿಕ ಕಿಞ್ಞಣ್ಣ ರೈ, ವೀರಪ್ಪ ಗೌಡ, ಮಹಿಳಾ ಕೃಷಿಕೆ ಶಾಲಿನಿ,ಗಂಗಾಧರ ನಾಯಕ್ ಮಾ.ಸನೋಜ್ ಎಂಬಿವರನ್ನು ಸನ್ಮಾನಿಸಲಾಯಿತು. ಭವ್ಯ ಮತ್ತು ರಮ್ಯ ಪ್ರಾರ್ಥನೆಗೈದರು. ಕೃಷಿ ಅಧಿಕಾರಿ ನಿತಿನ್ ಬಿ.ಕೆ ಸ್ವಾಗತಿಸಿ, ಸಹಾಯಕ ಕೃಷಿ ಅಧಿಕಾರಿ ಅಬ್ದುಲ್ಲ ಕುಂಞÂ್ಞ ವಂದಿಸಿದರು.