ಬದಿಯಡ್ಕ: ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ಪಂಚಾಯಿತಿ ಚುನಾವಣೆಯ ವಾರ್ಡ್ ಮಟ್ಟದ ಸಮಿತಿಯ ರೂಪೀಕರಣ ಹಾಗೂ ಇತರ ವಿಷಯಗಳ ಅವಲೋಕನ ಸಭೆ ಬದಿಯಡ್ಕ ಮಂಡಲ ಕಚೇರಿಯಲ್ಲಿ ಜರಗಿತು.
ಕಾಸರಗೋಡು ವಿಧಾನಸಭಾ ಕ್ಷೇತ್ರದ ಯು.ಡಿ.ಎಫ್. ಕನ್ವಿನರ್ ಖಾಲಿದ್ ಉದ್ಘಾಟಿಸಿದರು. ಮಂಡಲ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ನಾರಾಯಣ ಮಣಿಯಾಣಿ ನೀರ್ಚಾಲು, ಗ್ರಾಮಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್, ಖಾದರ್ ಮಾನ್ಯ, ಉಸ್ಮಾನ್ ಕಡವತ್, ಗಂಗಾಧರ ಗೋಳಿಯಡ್ಕ, ಶಾಫಿ ಗೋಳಿಯಡ್ಕ, ರಾಮ ಪಟ್ಟಾಜೆ, ರವಿ ಕುಂಟಾಲುಮೂಲೆ, ಸತೀಶ ಕುಂಟಾಲುಮೂಲೆ, ಜೋನಿ ಕಾರ್ಮಾರು, ಬಲ್ತೀಸ್ ಕ್ರಾಸ್ತ ಬೇಳ, ಶ್ರೀನಾಥ್, ಸವಾದ್ ಮಾತನಾಡಿದರು. ಮಂಡಲ ಕಾರ್ಯದರ್ಶಿ ಲೋಹಿತಾಕ್ಷನ್ ನಾಯರ್ ಸ್ವಾಗತಿಸಿ, ಮಂಡಲ ಕೋಶಾಧಿಕಾರಿ ಕುಮಾರನ್ ನಾಯರ್ ವಂದಿಸಿದರು.