ಮಂಜೇಶ್ವರ: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ದೈಗೋಳಿಯ ಶ್ರೀ ರಾಮಕೃಷ್ಣ ಭಜನಾ ಮಂದಿರದಲ್ಲಿ ಭಾನುವಾರ ಬಾಲಗೋಕುಲದ ವಾರ್ಷಿಕೋತ್ಸವ ಜರಗಿತು. ಪೂರ್ವಾಹ್ನ 10 ರಿಂದ ಪ್ರಾರಂಭವಾದ ವಿವಿಧ ಸ್ಪರ್ಧೆಗಳನ್ನು ಜನ್ಮಾಷ್ಟಮಿ ಸಮಿತಿಯ ಅಧ್ಯಕ್ಷ ಸುಂದರ ದೈಗೋಳಿ ಉದ್ಘಾಟಿಸಿದರು .ಭಕ್ತಿಗೀತೆ , ರಸಪ್ರಶ್ನೆ , ಕೃಷ್ಣವೇಷ, ಛದ್ಮವೇಷ, ಹಗ್ಗಜಗ್ಗಾಟ ಮುಂತಾದ ಸ್ಪರ್ಧೆಗಳು ಜರಗಿದವು. ಸಂಜೆ 6 ಕ್ಕೆ ನಡೆದ ಸಮಾರೋಪ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಂದರ ಮಾಸ್ತರ್ ದೈಗೋಳಿ ವಹಿಸಿದ್ದರು .ಧನ್ಯಶ್ರೀ, ಶ್ರುತಿಕ ಹಾಗೂ ನಿಶ್ಮಿತ ಪ್ರಾರ್ಥನೆ ಹಾಡಿದರು. ಗೌರವ ಉಪಸ್ಥಿತರಿದ್ದ ವೇದಮೂರ್ತಿ ಬೋಳಂತಕೋಡಿ ರಾಮ ಭಟ್ ಕೃμÁ್ಣಷ್ಟಮಿಯ ಮಹತ್ವವನ್ನು ವಿವರಿಸಿದರು. ಮುಖ್ಯ ಅತಿಥಿಗಳಾಗಿ ಖ್ಯಾತ ವೈದ್ಯ ಡಾ. ಶ್ರೀಕೃಷ್ಣ ಭಟ್ ಉತ್ತರ Éೂಡಂಗೆ ಹಾಗೂ ಉದ್ಯಮಿ ವಿಜೇಶ್ ನಾಯ್ಕ್ ನಡಿಗುತ್ತು ಉಪಸ್ಥಿತರಿದ್ದರು. ಒ ಶ್ಯಾಮ ಭಟ್ ಧಾರ್ಮಿಕ ಭಾಷÀಣ ಗೈದು ಹಿಂದೂ ಧರ್ಮದಲ್ಲಿ ಆಚರಣೆಗಳ ಮಹತ್ವವನ್ನು ತಿಳಿಸಿದರು. ಧಾರ್ಮಿಕ ನೇತಾರ ಗೋಪಾಲ ಶೆಟ್ಟಿ ನೇತ್ಯ ಅರಿಬೈಲು, ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕ ಸತೀಶ್ ಕೂಟತ್ತಜೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸೇವಾ ಪ್ರತಿನಿಧಿ ಮಲ್ಲಿಕ ಶುಭಾಶಂಸನೆಗೈದರು. ಶ್ರೀ ರಾಮಚಂದ್ರ ಶೆಟ್ಟಿಗಾರ್ ಬೋಳ್ನ ಹಾಗೂ ಶ್ರೀ ಸುಂದರ ದೈಗೋಳಿ ಉಪಸ್ಥಿತರಿದ್ದರು.
ಬಾಲಗೋಕುಲದ ತರಬೇತಿ ನೀಡುತ್ತಿರುವ ಕುಮಾರಿ ಯಜ್ಞಶ್ರೀ ಪೆÇಯ್ಯತ್ತಬೈಲು , ಹಾರ್ಮೋನಿಯಂ ತರಬೇತಿ ನೀಡುತ್ತಿರುವ ರಂಜನ್ ವಗೆನಾಡು ಹಾಗೂ ಯುವ ನಿರೂಪಕ ಡೈಜಿ ವಲ್ರ್ಡ್ ವಾಹಿನಿಯ ಲೋಕೇಶ್ ರೈ ಬಾಕ್ರಬೈಲು ಅವರನ್ನು ಶಾಲು ಹೊದೆಸಿ ಗೌರವಿಸಲಾಯಿತು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸತ್ಯನಾರಾಯಣ ಭಟ್ ಪಜ್ವ ಬಹುಮಾನ ವಿಜೇತರ ಹೆಸರನ್ನು ವಾಚಿಸಿದರು. ಮಂದಿರದ ಗೌರವಾಧ್ಯಕ್ಷ ನಾಣಿತ್ತಿಲು ಗೋಪಾಲಕೃಷ್ಣ ಭಟ್ ಪಾರೆಕುಂಡಡ್ಕ ಸ್ವಾಗತಿಸಿ, ಜನ್ಮಾಷ್ಟಮಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ದೈಗೋಳಿ ವಂದಿಸಿದರು. ಸಂತೋμï ಕುಮಾರ್ ಶೆಟ್ಟಿ ದೈಗೋಳಿ , ಧರ್ಮರಾಜ್ ಬೋಳ್ನ, ಬಾಬು ಮಡ್ವ, ಶಂಕರನಾರಾಯಣ ಭಟ್ ಸಾದಂಗಯ ಹಾಗೂ ಮಧುರ ದೈಗೋಳಿ ನೇತೃತ್ವ ನೀಡಿದ್ದರು. ಸಭೆಯ ನಂತರ ಬಾಲಗೋಕುಲದ ಮಕ್ಕಳಿಂದ ನೃತ್ಯ ವೈವಿಧ್ಯ ನಡೆಯಿತು . ಸೋಮವಾರ ರಾತ್ರಿ ಭಜನೆ ಹಾಗೂ ಕೃμÁ್ಣಷ್ಟಮಿ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.