ವಯನಾಡ್: ಭೂಕುಸಿತ ದುರಂತದಲ್ಲಿ ಸರ್ವಸ್ವವನ್ನೂ ಕಳೆದುಕೊಂಡವರಿಗೆ ಸಾಂತ್ವನ ಹೇಳಲು ನಟ ಮೋಹನ್ ಲಾಲ್ ವಯನಾಡಿಗೆ ಭೇಟಿ ನೀಡಿದರು. ಲೆಫ್ಟಿನೆಂಟ್ ಕರ್ನಲ್ ಆಗಿರುವ ಮೋಹನ್ ಲಾಲ್ ಮೊದಲು ಆಗಮಿಸಿದ್ದು ಸೇನಾ ಶಿಬಿರಕ್ಕೆ.
ಅಲ್ಲಿಂದ ದುರಂತ ಭೂಮಿಗೆ ತಲುಪಿದರು. ಮೋಹನ್ ಲಾಲ್ ಸೇನೆಯ ಸಮವಸ್ತ್ರದಲ್ಲಿ ಸೇನೆಯೊಂದಿಗೆ ಬಂದಿದ್ದರು. ಮುಂಡಕ್ಕೈ ಮತ್ತು ಮೆಪ್ಪಾಡಿ ದುರಂತ ಸ್ಥಳಗಳಿಗೂ ಭೇಟಿ ನೀಡಿದರು. ಕೋಝಿಕ್ಕೋಡ್ ನಿಂದ ಸೇನಾ ವಾಹನದಲ್ಲಿ ವಯನಾಡ್ ತಲುಪಿದರು
ನಿನ್ನೆ ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 25 ಲಕ್ಷ ರೂ.ನೀಡಿದ್ದರು. ವಯನಾಡ್ ದುರಂತದ ಸಂತ್ರಸ್ತರಿಗಾಗಿ ಅವಿರತವಾಗಿ ಶ್ರಮಿಸುತ್ತಿರುವ ಸ್ವಯಂಸೇವಕರು, ಪೋಲೀಸರು, ಅಗ್ನಿಶಾಮಕ ಮತ್ತು ರಕ್ಷಣಾ, ಎನ್‌ಡಿಆರ್‌ಎಫ್, ಸೈನಿಕರು ಮತ್ತು ಸರ್ಕಾರಿ ಅಧಿಕಾರಿಗಳಿಗೆ ನಾನು ವಂದಿಸುತ್ತೇನೆ ಎಂದು ಅವರು ತಮ್ಮ ಫೇಸ್‌ಬುಕ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.