ಕುಂಬಳೆ: ಜಿಲ್ಲೆಯಾದ್ಯಂತ ಭಾರೀ ಗಾಳಿ ಸಹಿತ ಮಳೆ ಮುಂದುವರಿದಿದೆ. ಮಳೆ ಹಾಗು ಗಾಳಿಗೆ ಕುಂಬಳೆ ಬದ್ರಿಯಾ ನಗರ ನಡುಕುನ್ನಿನ ಇಬ್ರಾಹಿಂ ವಳವಿಲ್ ಅವರ ಹೆಂಚು ಹಾಸಿದ ಮನೆ ಹಾನಿಗೀಡಾಗಿದೆ. ಈ ಸಂದರ್ಭದಲ್ಲಿ ಮನೆಯಲ್ಲಿ ಇಬ್ರಾಹಿಂ ಅವರ ಪತ್ನಿ ಹಾಗು ಮಗು ಮನೆಯಲ್ಲಿದ್ದು, ಮನೆಯಿಂದ ಹೊರಗೆ ಓಡಿದ್ದರಿಂದ ಸಂಭವನೀಯ ಅಪಾಯದಿಂದ ಪಾರಾಗಿದ್ದಾರೆ. ವಿಷಯ ತಿಳಿದು ಸ್ಥಳೀಯ ನಿವಾಸಿಗಳು ಹಾಗು ಪಂಚಾಯತಿ ಅಧಿಕಾರಿಗಳು ಮನೆಗೆ ಪ್ಲಾಸ್ಟಿಕ್ ಹೊದಿಸಿ ತಾತ್ಕಾಲಿಕವಾಗಿ ವಾಸ ಸೌಕರ್ಯ ಕಲ್ಪಿಸಿದ್ದಾರೆ.
ಪೆರ್ವಾಡ್ ಕಡಪುರದಲ್ಲಿ ತೆಂಗಿನ ಮರ ಬಿದ್ದು ಮರಿಯಮ್ಮ ಅವರ ಮನೆ ಹಾನಿಗೀಡಾಗಿದೆ. ಶಬ್ದ ಕೇಳಿ ಮನೆಯಿಂದ ಹೊರಗೆ ಓಡಿದ್ದರಿಂದ ಅಪಾಯದಿಂದ ಪಾರಾದರು. ಸ್ಥಳೀಯರು ತೆಂಗಿನ ಮರವನ್ನು ಕಡಿದು ತೆರವುಗೊಳಿಸಿದ್ದಾರೆ. ಪಂಚಾಯತ್ ಅಧ್ಯಕ್ಷೆ, ಜನಪ್ರತಿನಿಧಿಗಳು ಮನೆ ಸಂದರ್ಶಿಸಿದರು. ಮನೆಗೆ ಸುಮಾರು 20 ಸಾವಿರ ರೂ. ನಷ್ಟ ಅಂದಾಜಿಸಲಾಗಿದೆ.
(ತೆಂಗಿನ ಮರಬಿದ್ದ ಮರಿಯಮ್ಮ ಅವರ ಮನೆ.)