ಮಧೂರು: ಪರಕ್ಕಿಲ ಅಂಗನವಾಡಿಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯ ಬಶೀರ್ ಪಳ್ಳಂ ಧ್ವಜಾರೋಹಣಗೈದರು. ಬಳಿಕ ನಡೆದ ಸಭೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಮಹತ್ವದ ಕುರಿತು ಪ್ರಭಾಕರ ಉಳಿಯ, ಸುರೇಶ, ಬಾಲಕೃಷ್ಣ ನಂಬೀಶ ಉಳಿಯ ಮಾತನಾಡಿದರು. ತರುಣಕಲಾವೃಂದದ ವತಿಯಿಂದ ಮಕ್ಕಳಿಗೆ ಸಿಹಿತಿಂಡಿ ವಿತರಿಸಲಾಯಿತು. ಪದ್ಮರಾಜ ಗಟ್ಟಿ, ಜಯರಾಮ ಗಟ್ಟಿ, ಅಬ್ದುಲ್ ಆರೀಸ್, ಮುಜೀಬ್ ಮುಂತಾದವರು ನೇತೃತ್ವ ನೀಡಿದರು. ಅಂಗನವಾಡಿ ಶಿಕ್ಷಕಿ ವಿಮಲ ಸ್ವಾಗತಿಸಿ, ಸಹಾಯಕಿ ಆನಂದಿ ವಂದಿಸಿದರು.