ಕಾಸರಗೋಡು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕನ್ನಡತಿ ಡಿ.ಶಿಲ್ಪಾ ಅವರ ಶುಕ್ರವಾರ ಅಧಿಕಾರ ಸವೀಕರಿಸಿದ್ದರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಬಿಜೋಯ್ ಅವರಿಂದ ಜಿಲ್ಲಾ ಪೊಲೀಸ್ ಹೆಡ್‍ಕ್ವಾಟ್ರಸ್‍ನಲ್ಲಿ ನಡೆದ ಸಮಾರಂಭದಲ್ಲಿ ಅಧಿಕಾರ ವಹಿಸಿಕೊಂಡರು. ಶಿಲ್ಪಾ ಅವರು ಈ ಹಿಂದೆ ರಾಜ್ಯ ಪೊಲೀಸ್ ಅಕಾಡಮಿಯ ಪ್ರೊಕ್ಯೂರ್‍ಮೆಂಟ್ ಅಸಿ. ಇನ್ಸ್‍ಪೆಕ್ಟರ್ ಜನರಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಪ್ರಬೆಶನರಿ ಎಸ್ಪಿಯಾಗಿ ಕಾಸರಗೋಡಿನಲ್ಲಿ ಕರ್ತವ್ಯ ಆರಂಭಿಸಿದ್ದ ಶಿಲ್ಪಾ ಡಿ.ಅವರು 2020ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಕಾಸರಗೋಡಿನ ಪ್ರಥಮ ಮಹಿಳಾ ಎಸ್.ಪಿ ಎಂಬ ಹೆಗ್ಗಳಿಕೆಯೂ ಅವರಿಗಿದೆ.