ಕುಂಬಳೆ: ನವಮಾಧ್ಯಮಗಳ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸಲು ಸಾರ್ವಜನಿಕ ಚಟುವಟಿಕೆಗಳು ಮತ್ತು ಸಾಂಸ್ಕøತಿಕ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘ ಸಂಸ್ಥೆಗಳು ಮುಂದಾಗಬೇಕಿದೆ ಎಂದು ಪಾಣಕ್ಕಾಡ್ ಸೈಯದ್ ಮುಯೀನ್ ಅಲಿ ಶಿಹಾಬ್ ತಂಙಳ್ ಕರೆನೀಡಿದರು.
ದುಬೈ ಮಲಬಾರ್ ಕಲಾ ಮತ್ತು ಸಂಸ್ಕೃತಿ ಕೇಂದ್ರ ಮತ್ತು ಕುಂಬಳೆ ಪ್ರೆಸ್ ಪೋರಂ ಸಹಯೋಗದಲ್ಲಿ ಹೈಯರ್ ಸೆಕೆಂಡರಿ ವಿದ್ಯಾರ್ಥಿಗಳಿಗಾಗಿ ಭಾನುವಾರ ಕುಂಬಳೆಯಲ್ಲಿ ಆಯೋಜಿಸಿದ್ದ ನವ ಮಾಧ್ಯಮ ಕಾರ್ಯಾಗಾರದ ಮಾಹಿತಿ ಕರಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಹೊಸ ಯುಗದಲ್ಲಿ ಹೊಸ ಮಾಧ್ಯಮಗಳು ಹೆಚ್ಚಿನ ಪ್ರಭಾವ ಬೀರುತ್ತವೆ, ಅದರ ಸಕಾರಾತ್ಮಕತೆಯ ಜೊತೆಗೆ ದುಷ್ಪರಿಣಾಮUಳ ಬಗೆಗೂ ಎಲ್ಲರಿಗೂ ತಿಳಿದಿರಬೇಕು ಎಂದವರು ತಿಳಿಸಿದರು.
ಲೇಖಕ ಹಾಗೂ ಗಲ್ಫ್ ಪತ್ರಕರ್ತ ಕೆ.ಎಂ.ಅಬ್ಬಾಸ್ ಕರಪತ್ರವನ್ನು ಸ್ವೀಕರಿಸಿದರು. ಎ.ಕೆ.ಆರೀಫ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎಕೆಎಂ ಅಶ್ರಫ್ ಮುಖ್ಯ ಅತಿಥಿಗಳಾಗಿದ್ದರು. ದುಬೈ ಮಲಬಾರ್ ಕಲಾ ಮತ್ತು ಸಂಸ್ಕೃತಿ ವೇದಿಕೆಯ ಪ್ರಧಾನ ಸಂಚಾಲಕ ಅಶ್ರಫ್ ಕಾರ್ಲೆ ಸ್ವಾಗತಿಸಿದರು. ಕೆಜೆಯು ಜಿಲ್ಲಾಧ್ಯಕ್ಷ ಅಬ್ದುಲ್ ಲತೀಫ್ ಉಳುವಾರ್, ಕಾರ್ಯದರ್ಶಿ ಧನರಾಜ್, ಅಜೀಜ್ ಮರಿಕೆ, ಗಫೂರ್ ಎರಿಯಾಲ್, ಕುಂಬಳೆ ಪ್ರೆಸ್ ಪೋರಂ ಅಧ್ಯಕ್ಷ ಸುರೇಂದ್ರನ್ ಚಿಮೇನಿ, ಕಾರ್ಯದರ್ಶಿ ಐ.ಮೊಹಮ್ಮದ್ ರಫೀಕ್, ಕೋಶಾಧಿಕಾರಿ ಅಬ್ದುಲ್ ಲತೀಫ್, ಕೆ.ಎಂ.ಎ ಸತ್ತಾರ್, ಅಬ್ದುಲ್ಲ ಕುಂಬಳೆ, ತಾಹಿರ್ ಉಪ್ಪಳ, ಜೈನುದ್ದೀನ್ ಅಡ್ಕ, ಕುಂಞÂ್ಞ ಕರಕಂಡ, ಅಶ್ರಫ್ ಮೀಪುಗುರಿ, ಬಿ.ಎನ್.ಮುಹಮ್ಮದ್ ಅಲಿ, ಯೂಸುಫ್ ಉಳುವಾರ್, ಟಿ.ಎಂ.ಶುಹೈಬ್ ಇಬ್ರಾಹಿಂ ಬತ್ತೇರಿ, ಕೆ.ವಿ.ಯೂಸುಫ್, ಬಿ.ಎ.ರಹಿಮಾನ್, ಕೆ. ಎಂ ಅಝೀಝ್ ಮತ್ತು ಮುಹಮ್ಮದ್ ಕುಂಞÂ ಕುಂಬೋಳ್ ಮಾತನಾಡಿದರು.
ಮಂಜೇಶ್ವರ ಮತ್ತು ಕಾಸರಗೋಡು ತಾಲೂಕಿನ ವ್ಯಾಪ್ತಿಯ ಶಾಲೆಗಳ ಆಯ್ದ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್‍ನಲ್ಲಿ ತರಬೇತಿ ನಡೆಯಲಿದೆ. ಕಾರ್ಯಾಗಾರದಲ್ಲಿ ಕೆ.ಎಂ.ಅಬ್ಬಾಸ್ ಸಂಚಾಲಕರಾಗಿ ನಿರ್ವಹಿಸುವರು. ಪ್ರಮುಖ ಪತ್ರಕರ್ತರು ತರಗತಿ ನಡೆಸುವರು.