ಕಾಸರಗೋಡು: ಜ್ವರ ಬಾಧಿಸಿ ಕಳೆದ ಕೆಲವು ದಿವಸಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಬಾಲಕ ಮೃತಪಟ್ಟಿದ್ದಾನೆ. ಜಿಲ್ಲೆಯ ಮಾಲೋಂ ಪುಂಜ ನಿವಾಸಿ, ಮನೋಜ್-ಜೋನ್ಸಿ ದಂಪತಿ ಪುತ್ರ ಮಿಲನ್‌ಮನೋಜ್(7)ಮೃತಪಟ್ಟ ಬಾಲಕ. ಕೆಲವು ದಿವಸಗಳ ಹಿಂದೆ ಬಾಲಕಗೆ ಜ್ವರ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಕೋಯಿಕ್ಕೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡನೇ ತರಗತಿ ವಿದ್ಯಾರ್ಥಿಯಾಗಿದ್ದನು.