ನವದೆಹಲಿ: ಆಯಾ ರಾಜ್ಯಗಳ ಸಂಪ್ರದಾಯಗಳಿಗೆ ತಕ್ಕಂತೆ ಘಟಿಕೋತ್ಸವಗಳಿಗೆ ಭಾರತೀಯ ಸಂಸ್ಕೃತಿ ಬಿಂಬಿಸುವ ವಸ್ತ್ರ ಸಂಹಿತೆ ರೂಪಿಸುವಂತೆ ಅಧೀನ ಸಂಸ್ಥೆಗಳಿಗೆ ಕೇಂದ್ರದ ಆರೋಗ್ಯ ಸಚಿವಾಲಯ ಸೂಚಿಸಿದೆ.
ನವದೆಹಲಿ: ಆಯಾ ರಾಜ್ಯಗಳ ಸಂಪ್ರದಾಯಗಳಿಗೆ ತಕ್ಕಂತೆ ಘಟಿಕೋತ್ಸವಗಳಿಗೆ ಭಾರತೀಯ ಸಂಸ್ಕೃತಿ ಬಿಂಬಿಸುವ ವಸ್ತ್ರ ಸಂಹಿತೆ ರೂಪಿಸುವಂತೆ ಅಧೀನ ಸಂಸ್ಥೆಗಳಿಗೆ ಕೇಂದ್ರದ ಆರೋಗ್ಯ ಸಚಿವಾಲಯ ಸೂಚಿಸಿದೆ.
ಸದ್ಯ, ಘಟಿಕೋತ್ಸವಗಳಲ್ಲಿ ಬಳಸುತ್ತಿರುವ ಕಪ್ಪು ನಿಲುವಂಗಿ ಮತ್ತು ಟೋಪಿಯು ವಸಾಹತುಶಾಹಿ ಪರಂಪರೆಯಾಗಿದ್ದು, ಅದನ್ನು ಬದಲಿಸಬೇಕು ಎಂದು ಹೇಳಿದೆ.
ಈ ಉಡುಪು ಯುರೋಪ್‌ನಲ್ಲಿ ಮಧ್ಯಯುಗದಲ್ಲಿ ಹುಟ್ಟಿಕೊಂಡಿತು. ಬ್ರಿಟಿಷರು ತಮ್ಮ ಎಲ್ಲಾ ವಸಾಹತುಗಳಲ್ಲಿ ಅದನ್ನು ಪರಿಚಯಿಸಿದರು ಎಂದು ಅದು ಹೇಳಿದೆ.
'ಸರ್ಕಾರ ಕೈಗೊಂಡಿರುವ ನಿರ್ಧಾರದಂತೆ ಸಚಿವಾಲಯದ ಅಡಿಯಲ್ಲಿ ಬರುವ ಎಐಐಎಂಎಸ್/ಐಎನ್‌ಐಗಳು ಸೇರಿದಂತೆ ವೈದ್ಯಕೀಯ ಶಿಕ್ಷಣ ನೀಡುವ ಎಲ್ಲ ಸಂಸ್ಥೆಗಳು ಇರುವ ರಾಜ್ಯಗಳ ಸಂಪ್ರದಾಯಗಳ ಆಧಾರದ ಮೇಲೆ ಘಟಿಕೋತ್ಸವಗಳಿಗೆ ಭಾರತೀಯ ಸಂಸ್ಕೃತಿ ಬಿಂಬಿಸುವ ಸೂಕ್ತ ವಸ್ತ್ರ ಸಂಹಿತೆ ರೂಪಿಸಬೇಕು'ಎಂದು ಪ್ರಕಟಣೆ ತಿಳಿಸಿದೆ.
ಈ ಸಂಬಂಧ ಸಂಸ್ಥೆಗಳು ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆಯುವಂತೆ ಸಚಿವಾಲಯ ತಿಳಿಸಿದೆ.