ಕಾರು ಚಲಾಯಿಸುವಾಗ ಎಸಿ ಆನ್ ಮಾಡಿ ಹೋಗುವುದು ಸಾಮಾನ್ಯ. ಹೆಚ್ಚಿನ ಜನರು ಬಿಸಿಯ ಶಾಖವನ್ನು ತಪ್ಪಿಸಲು ಕಾರಿನಲ್ಲಿ ಎಸಿ ಬಳಸುತ್ತಾರೆ. ಬೇಸಿಗೆ ಇರಲಿ, ಮಳೆಗಾಲ, ಚಳಿಗಾಲವೇ ಇರಲಿ ಬಹುತೇಕರು ಎಸಿ ಬಳಸುತ್ತಾರೆ. ಅಷ್ಟೇ ಅಲ್ಲ, ವಿಂಡೋ ತೆಗೆದರೆ ಕಾರಿನೊಳಗೆ ಧೂಳು ಸೇರುತ್ತದೆ ಎಂದು ಎಸಿ ಆನ್ ಮಾಡುತ್ತಾರೆ.
ಕಾರು ಮಾದರಿ ಮತ್ತು ಎಂಜಿನ್: ವಿಭಿನ್ನ ಕಾರುಗಳು ವಿಭಿನ್ನ ರೀತಿಯ ಎಂಜಿನ್ಗಳನ್ನು ಹೊಂದಿರುತ್ತವೆ. ಹಾಗೆ ಎಸಿ ವ್ಯವಸ್ಥೆಗಳು ಸಹ ವಿಭಿನ್ನವಾಗಿವೆ. ಆದ್ದರಿಂದ ಒಂದು ಕಾರಿನಲ್ಲಿ ಎಸಿ ಆನ್ ಮಾಡಿ ಓಡಿಸುವುದರಿಂದ ಕಡಿಮೆಯಾದ ಮೈಲೇಜ್ ಇನ್ನೊಂದು ಕಾರಿನಲ್ಲಿ ಕಡಿಮೆಯಾಗುವುದಿಲ್ಲ. ವಿಶೇಷವಾಗಿ ಹೊಸ ಕಾರುಗಳಿಗೆ ಹೋಲಿಸಿದರೆ ಹಳೆಯ ಕಾರುಗಳಲ್ಲಿ ಎಸಿ ಆನ್ ಇದ್ದು ಚಾಲನೆ ಮಾಡಿದರೆ ಮೈಲೇಜ್ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.
ಹೊರಗಿನ ತಾಪಮಾನ: ಹೊರಗಿನ ತಾಪಮಾನವು ತುಂಬಾ ಹೆಚ್ಚಿದ್ದರೆ, ಎಸಿ ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಇದು ಕೂಡ ಮೈಲೇಜ್ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ.
ಕಿಟಕಿಗಳನ್ನು ತೆರೆಯುವುದು: ನೀವು ಎಸಿ ಆನ್ ಮಾಡಿ ಆಗಾಗ್ಗೆ ಕಿಟಕಿಗಳನ್ನು ತೆರೆದರೆ ಆಗ ಕಾರು ತಂಪಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದು ಮೈಲೇಜ್ ಮೇಲೂ ಹೆಚ್ಚಿನ ಪರಿಣಾಮ ಬೀರುತ್ತದೆ.
ಎಸಿ ಬಳಕೆ: ನೀವು ಎಸಿ ಅನ್ನು ಅತ್ಯಂತ ಕಡಿಮೆ ತಾಪಮಾನದಲ್ಲಿ ಹೊಂದಿಸಿದರೆ ಅಥವಾ ಪದೇ ಪದೇ ಆನ್ ಮತ್ತು ಆಫ್ ಮಾಡಿದರೆ, ಮೈಲೇಜ್ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಬಹುದು.
ನಗರಗಳಲ್ಲಿ ಕಾರು ಚಾಲನೆ: ಚಾಲನೆಯಲ್ಲಿರುವ ಎಸಿ ಮೈಲೇಜ್ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂಬುದು ನೀವು ಎಲ್ಲಿ ಕಾರನ್ನು ಓಡಿಸುತ್ತಿದ್ದೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ನಗರಗಳಲ್ಲಿ ವಾಹನ ಚಲಾಯಿಸುವಾಗ ಟ್ರಾಫಿಕ್‌ನಲ್ಲಿ ಪದೇ ಪದೇ ನಿಲ್ಲಿಸಬೇಕಾಗುತ್ತದೆ. ಆಗ ಎಂಜಿನ್ ಹೆಚ್ಚು ಕೆಲಸ ಮಾಡಬೇಕು ಮತ್ತು ಮೈಲೇಜ್ ಕೂಡ ಕುಸಿಯುತ್ತದೆ.
ಎಸಿ ಉಪಯೋಗಿಸುವ ಬದಲು ಹೀಗೆ ಮಾಡಿ
ಕಿಟಕಿಗಳನ್ನು ತೆರೆಯಿರಿ: ಹೊರಗಿನ ತಾಪಮಾನವು ತುಂಬಾ ಬಿಸಿಯಾಗಿಲ್ಲದಿದ್ದರೆ, ಕಿಟಕಿಗಳನ್ನು ತೆರೆಯುವ ಮೂಲಕ ನೀವು ಕಾರನ್ನು ತಂಪಾಗಿರಿಸಬಹುದು.
ಎಸಿಯನ್ನು ಕಡಿಮೆ ತಾಪಮಾನದಲ್ಲಿ ಇಡಿ: ಎಸಿಯನ್ನು ಅತ್ಯಂತ ಕಡಿಮೆ ತಾಪಮಾನದಲ್ಲಿ ಇಡುವುದರಿಂದ ಮೈಲೇಜ್ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ.
ಅಗತ್ಯವಿದ್ದಾಗ ಬಳಸಿ: ಎಸಿ ಅನ್ನು ಅಗತ್ಯವಿದ್ದಾಗ ಮಾತ್ರ ಬಳಸಿ. ಕಾರಿನ ಒಳಭಾಗ ಸಂಪೂರ್ಣ ತಂಪಾದ ಬಳಿಕ ಅಗತ್ಯವಿಲ್ಲದಿದ್ದರೆ ಎಸಿ ಅನ್ನು ಆಫ್ ಮಾಡಬಹುದು.
ಸರ್ವಿಸ್ ಮಾಡಿಸಿ: ನಿಮ್ಮ ಕಾರನ್ನು ನಿಯಮಿತವಾಗಿ ಸರ್ವಿಸ್ ಮಾಡುವುದರಿಂದ, ನಿಮ್ಮ ಕಾರಿನ ಎಂಜಿನ್ ಚೆನ್ನಾಗಿ ಕೆಲಸ ಮಾಡುತ್ತದೆ ಮತ್ತು ಮೈಲೇಜ್ ಕೂಡ ಹೆಚ್ಚಾಗುತ್ತದೆ ಎಂಬುದು ನೆನಪಿರಲಿ.