ಪಾಕಿಸ್ತಾನ: ಕೇರಳ ಅಭೂತಪೂರ್ವ ವಿಪತ್ತಿಗೆ ಸಾಕ್ಷಿಯಾಗುತ್ತಿದ್ದಂತೆ, ವಯನಾಡಿನ ಸಂತ್ರಸ್ತ ಜನರಿಗೆ ವಿವಿಧ ಕಡೆಗಳಿಂದ ಸಹಾಯದ ಮಹಾಪೂರವೇ ಹರಿದು ಬರುತ್ತಿದೆ. ಪಾಕಿಸ್ತಾನದ ಮೂಲದ ದಂಪತಿ ವಯನಾಡಿನ ಜನತೆ ಸಹಾಯಕ್ಕೆ ಮುಂದೆ ಬಂದಿದ್ದಾರೆ.
ಪಾಕಿಸ್ತಾನ: ಕೇರಳ ಅಭೂತಪೂರ್ವ ವಿಪತ್ತಿಗೆ ಸಾಕ್ಷಿಯಾಗುತ್ತಿದ್ದಂತೆ, ವಯನಾಡಿನ ಸಂತ್ರಸ್ತ ಜನರಿಗೆ ವಿವಿಧ ಕಡೆಗಳಿಂದ ಸಹಾಯದ ಮಹಾಪೂರವೇ ಹರಿದು ಬರುತ್ತಿದೆ. ಪಾಕಿಸ್ತಾನದ ಮೂಲದ ದಂಪತಿ ವಯನಾಡಿನ ಜನತೆ ಸಹಾಯಕ್ಕೆ ಮುಂದೆ ಬಂದಿದ್ದಾರೆ.
ಮುಖ್ಯಮಂತ್ರಿಗಳ ಪರಿಹಾರ ನಿಧಿಯ ಮೂಲಕ ವಯನಾಡಿಗಾಗಿ ಗಣ್ಯರು, ಚಲನಚಿತ್ರ ತಾರೆಯರು ಮತ್ತು ಸಾಮಾನ್ಯ ಜನರು ದೇಣಿಗೆ ನೀಡುತ್ತಿದ್ದಾರೆ.
ಪಾಕಿಸ್ತಾನದ ಮೂಲದ ತೈಮೂರ್ ತಾರಿಕ್ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಸ್ಟಾರ್ ಕೊಡುಗೆ ನೀಡಿದ್ದಾರೆ. ಪತ್ನಿ ಶ್ರೀಜಾ ಅವರ ಖಾತೆಯ ಮೂಲಕ ಹಣವನ್ನು ಕಳುಹಿಸಿದ್ದಾರೆ.
ಹೆಚ್ಚಿನ ಜನರಿಗೆ ಸ್ಫೂರ್ತಿ ನೀಡಲು ಈ ಹಣವನ್ನು ಕಳುಹಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನದ ಎಲ್ಲರೂ ಸಹೋದರರು ಎಂದು ತೈಮೂರ್ ಹೇಳಿದ್ದಾರೆ.
ವಯನಾಡು ಭೂಕುಸಿತದ ಭೀಕರತೆಗೆ ಸುಮಾರು 360ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 200ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಈ ಭೀಕರೆ ಮಾತ್ರ ಕೇರಳಿಗರ ಮನದಲ್ಲಿ ಮಾಸದಂತೆ ಘಾಯ ಮಾಡಿ ಹೋಗಿದೆ.