ಪಣಜಿ: ವಂಚಕನೊಬ್ಬ ತನ್ನ ವಾಟ್ಸ್‌ಆಯಪ್ ಸಂಖ್ಯೆಗೆ ಗೋವಾ ವಿಧಾನಸಭೆಯ ಸ್ಪೀಕರ್ ಭಾವಚಿತ್ರ ಬಳಸಿ ಶಾಸಕರಿಗೆ ಹಣದ ಬೇಡಿಕೆ ಇಟ್ಟು, ಸಾಕಷ್ಟು ನಗದು ಲಪಟಾಯಿಸಿದ ಪ್ರಕರಣ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಪಣಜಿ: ವಂಚಕನೊಬ್ಬ ತನ್ನ ವಾಟ್ಸ್‌ಆಯಪ್ ಸಂಖ್ಯೆಗೆ ಗೋವಾ ವಿಧಾನಸಭೆಯ ಸ್ಪೀಕರ್ ಭಾವಚಿತ್ರ ಬಳಸಿ ಶಾಸಕರಿಗೆ ಹಣದ ಬೇಡಿಕೆ ಇಟ್ಟು, ಸಾಕಷ್ಟು ನಗದು ಲಪಟಾಯಿಸಿದ ಪ್ರಕರಣ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಈ ಕುರಿತು ಕಾಣಕೋಣ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವಂಚಕನ ವಿರುದ್ಧ ಸ್ಪೀಕರ್ ರಮೇಶ್ ತಾವಡ್ಕರ್ ಅವರು ದೂರು ದಾಖಲಿಸಿದ್ದಾರೆ.
'ತಮ್ಮ ಭಾವಚಿತ್ರವನ್ನು ತನ್ನ ವಾಟ್ಸ್‌ಆಯಪ್ ಸಂಖ್ಯೆಗೆ ಬಳಸಿ, ಆ ಮೂಲಕ ಶಾಸಕರಿಗೆ ಹಣ ಕಳುಹಿಸುವಂತೆ ವಂಚಕನೊಬ್ಬ ಬೇಡಿಕೆ ಇಟ್ಟಿದ್ದ. ಜತೆಗೆ ಕರೆ ಮಾಡಿಯೂ ಹಣ ಕಳುಹಿಸುವಂತೆ ಹೇಳಿದ್ದ. ನಾನು ಯಾವುದೇ ಶಾಸಕರಿಂದಲೂ ಹಣ ಕೇಳಿಲ್ಲ. ಆದರೆ ನನ್ನ ಹೆಸರನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ' ಎಂದು ಅವರು ದೂರಿನಲ್ಲಿ ಹೇಳಿದ್ದಾರೆ.
'ಈ ದೂರನ್ನು ಗಂಭೀರವಾಗಿ ಪರಿಗಣಿಸಿ, ವಂಚಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು' ಎಂದೂ ತಾವಡ್ಕರ್ ಒತ್ತಾಯಿಸಿದ್ದಾರೆ.