ಮಂಜೇಶ್ವರ: ಶ್ರೀ ಮಹಾಗಣಪತಿ ಶಂಕರನಾರಾಯಣ ಸಾಂಸ್ಕøತಿಕ ಕಲಾಪ್ರತಿಷ್ಠಾನ ಕೋಳ್ಯೂರು.ಇದರ ಆಶ್ರಯದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು, ಪ್ರಾಯೋಜಕತ್ವದಲ್ಲಿ ಕೋಳ್ಯೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಹಿರಿಯರ ನೆನಪು ಕಾರ್ಯಕ್ರಮ ಇತ್ತೀಚೆಗೆ ಯಶಸ್ವಿಯಾಗಿ ಜರಗಿತು.
ಸಮಾರಂಭದ ಅಂಗವಾಗಿ ಹಿರಿಯ ಯಕ್ಷಗಾನ ಕಲಾವಿದ ಕೀರ್ತಿಶೇಷ ಕೋಳ್ಯೂರು ನಾರಾಯಣ ಭಟ್ಟ್ರರ ಸಂಸ್ಮರಣೆ ಜರಗಿತು. ಕುರಿಯ ಗೋಪಾಲಕೃಷ್ಣ ಭಟ್ ಅವರು ಸಂಸ್ಮರಣಾ ಭಾಷಣ ಗೈದರು. ಕೋಳ್ಯೂರು ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ರವಿಶಂಕರ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸತೀಶ ಅಡಪ ಸಂಕಬೈಲು ಪ್ರಾಸ್ತಾವಿಕವಾಗಿ ಮಾತನಾಡಿದರು. ಯಕ್ಷಗಾನ ಅಕಾಡೆಮಿ ಸದಸ್ಯ , ಕೃಷ್ಣಪ್ಪ ಕಿನ್ಯ, ಕೃಷ್ಣ ಕಾರಂತ್ ಕೋಳ್ಯೂರು, ಪ್ರತಿμÁ್ಠನದ ಸಂಚಾಲಕ ಭಾಸ್ಕರ ಕೋಳ್ಯೂರು ಉಪಸ್ಥಿತರಿದ್ದರು.
ಯಕ್ಷಗಾನ ಪ್ರಾರ್ಥನೆ ಹಾಡಿನೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ, ನಿವೃತ್ತ ಮುಖ್ಯೋಪಾಧ್ಯಾಯ ಹಾಗೂ ಪ್ರತಿμÁ್ಠನದ ಕಾರ್ಯದರ್ಶಿ ಗೋಪಾಲಕೃಷ್ಣ ಭಟ್ ಸ್ವಾಗತಿಸಿ, ನಾಗರಾಜ ಪದಕಣ್ಣಾಯ ಮೂಡಂಬೈಲು ನಿರ್ವಹಿಸಿದರು. ವಿಠ್ಠಲ ಭಟ್ ಮೊಗಸಾಲೆ ವಂದಿಸಿದರು. ಬಳಿಕ ಯಕ್ಷಬಳಗ ಹೊಸಂಗಡಿ ತಂಡದಿಂದ ಅತಿಕಾಯ ಕಾಳಗ ಯಕ್ಷಗಾನ ತಾಳಮದ್ದಳೆ ಜರಗಿತು.