ಪತ್ತನಂತಿಟ್ಟ: ನಟ ಮೋಹನ್ ಲಾಲ್ ಹಾಗೂ ಭಾರತೀಯ ಸೇನೆ ವಿರುದ್ಧ ದ್ವೇಷ ಹರಡಿದ್ದ ಚೆಕುತಾನ್ ಎಂಬ ಯೂಟ್ಯೂಬರ್ ನನ್ನು ಬಂಧಿಸಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ‘ಚೆಕುತಾನ್’ ಪೇಜ್ ಅನ್ನು ನಿರ್ವಹಿಸುತ್ತಿರುವ ‘ಚೆಕುತಾನ್’ ಯೂಟ್ಯೂಬ್ ಚಾನೆಲ್ ಮಾಲೀಕ ಪತ್ತನಂತಿಟ್ಟ ತಿರುವಳ್ಳ ಮಂಜಾಡಿ ಮೂಲದ ಅಜು ಅಲೆಕ್ಸ್ ಅವರನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ.
ಫೇಸ್ ಬುಕ್ ಪೇಜ್ ಚೆಕುತ್ತಾನ್ ಮೂಲಕ ವಯನಾಡಿನಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಿದ್ದ ಭಾರತೀಯ ಸೇನೆ ಹಾಗೂ ನಟ ಮೋಹನ್ ಲಾಲ್ ವಿರುದ್ಧ ಎಫ್ ಬಿ ಪೇಜ್ ನಲ್ಲಿ ವಿವಾದಾತ್ಮಕ ಹೇಳಿಕೆ ನೀಡಿರುವುದು ಈ ಪ್ರಕರಣಕ್ಕೆ ಕಾರಣವಾಗಿತ್ತು. ಪ್ರಕರಣ ದಾಖಲಾದ ಬಳಿಕ ಆತ ತಲೆಮರೆಸಿಕೊಂಡಿದ್ದ. ಚಲಚಿತ್ರ ಕಲಾವಿದರು, ನಿರ್ದೇಶಕರ ಸಂಘವಾದ ’ಅಮ್ಮ’ ದ ಪ್ರಧಾನ ಕಾರ್ಯದರ್ಶಿ ಮತ್ತು ನಟ ಸಿದ್ದಿಕ್ ಅವರ ದೂರಿನ ಮೇರೆಗೆ ತಿರುವಲ್ಲಾ ಪೋಲೀಸರು ಅಜು ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಅಜು ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 192,296(ಬಿ) ಮತ್ತು ಕೆಪಿ ಆಕ್ಟ್ 2011ರ 120(0) ಅಡಿಯಲ್ಲಿ ಆರೋಪ ಹೊರಿಸಲಾಗಿದೆ. ಭಾರತೀಯ ಟೆರಿಟೋರಿಯಲ್ ಆರ್ಮಿಯಲ್ಲಿ ಲೆಫ್ಟಿನೆಂಟ್ ಕರ್ನಲ್ ಹುದ್ದೆಯನ್ನು ಹೊಂದಿರುವ ಮೋಹನ್ ಲಾಲ್ ಅವರು ಸೇನಾ ಸಮವಸ್ತ್ರದಲ್ಲಿ ವಯನಾಡ್ ಭೂಕುಸಿತ ದುರಂತದ ಸ್ಥಳಕ್ಕೆ ಭೇಟಿ ನೀಡುವುದರ ವಿರುದ್ಧ ಯುಟ್ಯೂಬ್ ಚಾನೆಲ್‍ನಲ್ಲಿ ಅಜು ಅಲೆಕ್ಸ್ ಚೆಕುತಾನ್ ಮಾನಹಾನಿಕರ ಟೀಕೆಗಳನ್ನು ಮಾಡಿದ್ದ.