ಮಂಜೇಶ್ವರ: ಇತಿಹಾಸ ಪ್ರಸಿದ್ದ 18 ಪೇಟೆಗಳ ದೇವಾಲಯವೆಂದೇ ಖ್ಯಾತಿವೆತ್ತ ಮಂಜೇಶ್ವರ ಶ್ರೀಅನಂತೇಶ್ವರ ದೇವಳದಲ್ಲಿ ಇಂದು(ಶುಕ್ರವಾರ) ನಾಗರಪಂಚಮಿ ಉತ್ಸವ ನಡೆಯಲಿದೆ.
ಮುಂಜಾನೆ ಶ್ರೀದೇವರ ಪ್ರಾತಃಪೂಜೆಯ ಬಳಿಕ 5.30 ರಿಂದ ಹೊರಗಿನ ನಾಗಕಟ್ಟೆಯಲ್ಲಿ ಅಭಿಷೇಕ ನಡೆಯಲಿದೆ. ಮಧ್ಯಾಹ್ನ 12ರ ವರೆಗೂ ನಡೆಯಲಿರುವ ಕ್ಷೀರ, ಎಳನೀರು ಅಭಿಷೇಕದ ಬಳಿಕ ದೇವಳದಲ್ಲಿ ವಿಶೇಷ ವಾಸುಕೀಪೂಜೆ ನಡೆದು, ಮಂಗಳಾರತಿ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಲಿದೆ ಎಂದು ಶ್ರೀಕ್ಷೇತ್ರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.