HEALTH TIPS

ಅಖಿಲ ಭಾರತ ತುಳು ಒಕ್ಕೂಟದ ತುಳು ನಾಡ ಜಾನಪದ ಉಚ್ಛಯಕ್ಕೆ ಚಾಲನೆ

            ಮಂಗಳೂರು; ಅಖಿಲ ಭಾರತ ತುಳು ಒಕ್ಕೂಟದ ವತಿಯಿಂದ ತುಳುನಾಡ ಜಾನಪದ ಉಚ್ಛಯವನ್ನು ನಗರದ ಪುರಭವನದಲ್ಲಿಂದು ನಿರ್ಮಿಸಿದ ಅಡ್ಯಾರ್ ಮಹಾಬಲ ಶೆಟ್ಟಿ ವೇದಿಕೆ ಯಲ್ಲಿ ಉದ್ಯಮಿ ಡಾ.ಎ. ಸದಾನಂದ ಶೆಟ್ಟಿಯವರು ಉದ್ಘಾಟಿಸಿ ಶುಭ ಹಾರೈಸಿದರು.

                   ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡುತ್ತಾ, ತುಳು ಭಾಷೆಯನ್ನು ರಾಜ್ಯದ ಎರಡನೇ ಭಾಷೆಯಾಗಿ ಅನುಷ್ಠಾನಗೊಳಿಸಲು ಡಾ.ಮೋಹನ್ ಆಳ್ವರ ವರದಿಯನ್ನು ಜಾರಿ ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಎಲ್ಲಾ ರಾಜಕೀಯ ಮುಖಂಡರ ಸಹಕಾರ ಅಗತ್ಯವಿದೆ. ನಮ್ಮ ಮುಂದಿನ ಪೀಳಿಗೆಗೆ ತುಳುನಾಡಿನ ಚರಿತ್ರೆ ತಿಳಿಯಬೇಕಾದರೆ ಇಂತಹ ಉಚ್ಛಯದ ಅಗತ್ಯವಿದೆ ಎಂದರು.

               ಅಖಿಲ ಭಾರತ ತುಳು ಒಕ್ಕೂಟದಅಧ್ಯಕ್ಷ ಎ.ಸಿ.ಭಂಡಾರಿ ಅತಿಥಿಗಳನ್ನು ಸ್ಮರಣೆ ನೀಡಿ ಸ್ವಾಗತಿಸಿದರು.

             ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಲ್ .ಧರ್ಮ ಮಾತನಾಡುತ್ತಾ, ತುಳು ಭಾಷೆ ಸಂವಿಧಾನದ ಏಂಟನೇ  ಪರಿಚ್ಛೇಧದಲ್ಲಿ ಸೇರ್ಪಡೆಯಾಗಬೇಕಾದರೆ ಸಂಸತ್ತಿನಲ್ಲಿ ಜನಪ್ರತಿನಿಧಿಗಳು ಸಾಮೂಹಿಕವಾಗಿ ತಮ್ಮ ಇಚ್ಛಾ ಶಕ್ತಿಯನ್ನು ಪ್ರದರ್ಶಿಸಬೇಕಾಗಿದೆ. ಇಂತಹ ಪ್ರಯತ್ನ ತಮಿಳು ಭಾಷೆ, ಒರಿಯಾ ಭಾಷೆಗೆ ಸೂಕ್ತವಾದ ಸ್ಥಾನಮಾನ ಕಲ್ಪಿಸುವಲ್ಲಿ ಸಾಧ್ಯವಾಗಿದೆ ಎಂದರು.

             ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡುತ್ತಾ, ತುಳು ನಾಡಿನ ಮಣ್ಣಿನ ಜೊತೆ ಒಂದು ಸಂಸ್ಕೃತಿ ಹಾಸುಹೊಕ್ಕಾಗಿದೆ. ಹಗಲು ರಾತ್ರಿ ನಿರಂತರವಾಗಿ ನಡೆಯುವ ತುಳುನಾಡಿನ ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮಗಳ ವೈಶಿಷ್ಟ್ಯತೆ ಇತರ ಕಡೆ ಕಾಣಲು ಸಾಧ್ಯವಿಲ್ಲ ಎಂದರು. ಸಾಹಿತಿ ಜಾನಕಿ ಬ್ರಹ್ಮಾವರ ಶುಭ ಹಾರೈಸಿದರು.

          ಸಮಾರಂಭದಲ್ಲಿ ಅತಿಥಿಗಳಾಗಿ ದಿವಾಕರ ಶೆಟ್ಟಿ ಸಾಂಗ್ಲಿ, ನಗ್ರಿಗುತ್ತು ರೋಹಿತ್‌ ಶೆಟ್ಟಿ,ಅಶೋಕ್ ಪಕ್ಕಳ ಮುಂಬೈ,ಸಾಹಿತಿ ಜಾನಕಿ ಬ್ರಹ್ಮಾವರ, ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಜೋಕಿಂ ಸ್ಟ್ಯಾನ್ಲಿ ಅಲ್ವಾ ರೀಸ್ ,ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು,ಮಾಜಿ ಸಚಿವ ನಾಗರಾಜ ಶೆಟ್ಟಿ ,ಒಕ್ಕೂಟದ ಉಪಾಧ್ಯಕ್ಷರಾದ ದಾಮೋದರ ನಿಸರ್ಗ, ವಿಜಯಲಕ್ಷ್ಮಿ ಬಿ. ಶೆಟ್ಟಿ, ತಾರನಾಥ ಶೆಟ್ಟಿ ಬೋಳಾರ್, ಕೋಶಾಧಿಕಾರಿ ಚಂದ್ರಹಾಸ ದೇವಾಡಿಗ, ರಾಜೇಶ್ ಆಳ್ವ, ಮತ್ತಿತರರು ಉಪಸ್ಥಿತರಿದ್ದರು.

              ಸಂಘಟನೆಯಪ್ರಧಾನ ಕಾರ್ಯದರ್ಶಿ ಮುಲ್ಕಿ ಕರುಣಾಕರ ಶೆಟ್ಟಿ ಒಕ್ಕೂಟದ ವರದಿ ನೀಡಿದರು. ಪ್ರಧಾನ ಸಂಚಾಲಕ ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಮಂಗಳೂರು ವಿಶ್ವವಿದ್ಯಾನಿಲಯದಿಂದ ಪುರಭವನದ ವರೆಗೆ ನಡೆದ ತುಳುವೆರ ದಿಬ್ಬಣ ಮೆರವಣಿಗೆಯಲ್ಲಿ .ವಿವಿಧ ಕಲಾ ತಂಡಗಳು,ಜಾನಪದ ಕಲಾಕೂಟಗಳು ಭಾಗವಹಿಸಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries