ಮಂಜೇಶ್ವರ :ಮಹಾತ್ಮಾ ಗಾಂಧೀಜಿಯವರ ಅನುಯಾಯಿ ವಿನೋಬಾ ಭಾವೆಯವರು 1957ರ ಆಗಸ್ಟ್ 23ರಂದು ಮಂಜೇಶ್ವರದಲ್ಲಿ ಸ್ಥಾಪಿಸಿದ ಶಾಂತಿ ಸೇನೆಯ ಸವಿನೆನಪಿನಲ್ಲಿ ಮಂಜೇಶ್ವರದ ವಿನೋಬಾ ವೆಂಕಟೇಶ್ ರಾವ್ ಶಾಂತಿ ಸೇನಾ ಫೌಂಡೇಶನ್(ರಿ) ನೇತೃತ್ವದಲ್ಲಿ ಶಾಂತಿ ಸೇನಾ ದಿನಾಚರಣೆಯನ್ನು ವರ್ಕಾಡಿಯಲ್ಲಿ ಆಚರಿಸಲಾಯಿತು.
ಶಾಂತಿ ಸೇನಾ ಫೌಂಡೇಶನ್ ಪ್ರಧಾನ ಸಂಚಾಲಕ, ಮಾಜೀ ಜಿ ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿಯವರ ಅಧ್ಯಕ್ಷತೆಯಲ್ಲಿ ಕಾಸರಗೋಡು ಜಿ.ಪಂ.ಸದಸ್ಯೆ ಕಮಲಾಕ್ಷಿ ಕೆ. ಗಾಂಧೀಜಿ ಹಾಗೂ ವಿನೋಬಾ ಭಾವೆಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯ್ಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಮುಖ್ಯ ಪ್ರಭಾಷಣಗೈದ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸಂಕಬೈಲು ಸತೀಶ ಅಡಪ ಅವರು, ಸಮಾಜದಲ್ಲಿ ಶಾಂತಿ ಮತ್ತು ಸಹಬಾಳ್ವೆಯ ಸದುದ್ದೇಶದೊಂದಿಗೆ ಮಹಾತ್ಮಾ ಗಾಂಧೀಜಿಯವರ ಕನಸಿನ ಶಾಂತಿ ಸಮಾಜದ ನಿರ್ಮಾಣಕ್ಕೆ ಜನತೆಯನ್ನು ಸಂಘಟಿಸಲು ವಿನೋಬಾ ಭಾವೆಯವರು ಸ್ಥಾಪಿಸಿದ ಶಾಂತಿ ಸೇನೆಯನ್ನು ಸುದೃಢಗೊಳಿಸುವಂತಹ ಜವಾಬ್ದಾರಿ ನಮ್ಮದಾಗಿದೆ, ಗಾಂಧೀ ಸಂದೇಶದೊಂದಿಗೆ ಯುವಜನತೆಯನ್ನು ಮುಂದಿನ ಪೀಳಿಗೆಗೆ ಸಜ್ಜುಗೊಳಿಸುವ ಮಹತ್ಕಾರ್ಯವಾಗಬೇಕಾಗಿದೆಯೆಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯರಾದ ಎಸ್.ಅಬ್ದುಲ್ ಖಾದರ್ ಹಾಜೀ, ಸದಾಶಿವ ಪೆÇಯ್ಯತ್ತಬೈಲು, ವಿಕ್ಟರ್ ವೇಗಸ್, ವರ್ಕಾಡಿ ಮಂಡಲ ಕಾಂಗ್ರೆಸ್ ಅಧ್ಯಕ್ಷ ಪುರುμÉೂೀತ್ತಮ ಅರಿಬೈಲು, ಮಾಜಿ ಅಧ್ಯಕ್ಷ ಮೊಹಮ್ಮದ್ ಮಜಾಲು, ಮೀಂಜ ಮಂಡಲ ಕಾಂಗ್ರೆಸ್ ಅಧ್ಯಕ್ಷ ದಾಮೋದರ ಮಾಸ್ತರ್, ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಮೊಹಮ್ಮದ್ ಹನೀಫ್, ಮುಖಂಡರಾದ ಬಿ.ಕೆ.ಮೊಹಮ್ಮದ್, ಹಮೀದ್ ಕಣಿಯೂರು, ಬಿಜು ಗಾಂಧೀನಗರ, ಮೆಹಮೂದ್ ಕೆದುಂಬಾಡಿ, ಶಶಿಧರ ನಾಯ್ಕ್, ಅಬೂಬಕ್ಕರ್ ಪೊಯ್ಯೆ, ವಿನೋದ್ ಕುಮಾರ್ ಪಾವೂರು, ರಾಜೇಶ್ ಡಿ.ಸೋಜ ಪಾಲೆಂಗ್ರಿ, ವರ್ಕಾಡಿ ಮಂಡಲ ಯೂತ್ ಕಾಂಗ್ರೆಸ್ ಅಧ್ಯಕ್ಷೆ ಶರ್ಮಿಳಾ ಪಿಂಟೋ, ರಾಬಿಯಾ, ಶೈಲೇಶ್ ಕೆ, ಗಂಗಾಧರ ಕೆ.ಎಸ್, ರಾಜೇಶ್ ಡಿ.ಸೋಜಾ, ಹನೀಫ್, ಮುಂತಾದವರು ಉಪಸ್ಥಿತರಿದ್ದರು.