HEALTH TIPS

ಕುಂಬಳೆ ಸೇವಾ ಸಹಕಾರಿ ಬ್ಯಾಂಕ್ ಕಳವು-ಮೂರು ಬೆರಳಚ್ಚು ಪತ್ತೆ

    ಕುಂಬಳೆ: ಕುಂಬಳೆ ಸೇವಾ ಸಹಕಾರಿ ಬ್ಯಾಂಕ್ ಪೆರುವಾಡ್ ಶಾಖೆಯ ಕಿಟಿಕಿ ಗ್ರಿಲ್ಸ್ ವಿದ್ಯುತ್ ಕಟ್ಟರ್ ಬಳಸಿ ತುಂಡರಿಸಿ ನುಗ್ಗಿದ ಕಳ್ಳರು ಕಳವಿಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಮೂರು ಬೆರಳಚ್ಚು ಸಂಗ್ರಹಿಸಿದ್ದಾರೆ. ಆರೋಪಿಗಳು ಬಳಸಿದ್ದ ಇಲೆಕ್ಟ್ರಾನಿಕ್ ಕಟ್ಟರ್ ಬ್ಯಾಂಕ್ ವಠಾರದಿಂದ ಪತ್ತೆಹಚ್ಚಲಾಗಿದ್ದು, ಇದು ಕಳವುಗೈದು ತಂದಿರಬೇಕೆಂದು ಸಂಶಯಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪೆರುವಾಡ್‍ನ ಬಹು ಅಂತಸ್ತಿನ ಕಟ್ಟಡದ ತಳಭಾಗದ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಶಾಖಾ ಕೊಠಡಿಯ ಹಿಂಭಾಗದ ಗ್ರಿಲ್ಸ್ ತುಂಡರಿಸಿ ನುಗ್ಗಿ ಕಳವಿಗೆ ಯತ್ನಿಸಲಾಗಿತ್ತು. ಬ್ಯಾಂಕ್ ಪ್ರಬಂಧಕಿ ಮಿನಿ ಮೋಳ್ ಅವರ ದೂರಿನನ್ವಯ ಪೊಲೀಸರು ಕೇಸು ದಾಖಲಿಸಿಕೊಂಡಿದ್ದು, ಆರೋಪಿಗಳ ಶೀಘ್ರ ಬಂಧಿಸುವ ಭರವಸೆ ವ್ಯಕ್ತಪಡಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries