HEALTH TIPS

ಗಮನಿಸಿ.. ಕಾರಿನ ಕ್ಲಚ್ ಬಳಸುವಾಗ ಈ ತಪ್ಪುಗಳನ್ನು ಮಾಡಬೇಡಿ..!

 ಭಾರತದಲ್ಲಿ ಕಾರುಗಳ ಸಂಖ್ಯೆ ಕ್ರಮೇಣ ಹೆಚ್ಚುತ್ತಿದೆ. ಸದ್ಯದ ತಂತ್ರಜ್ಞಾನದ ಪ್ರಕಾರ ಆಟೋಮ್ಯಾಟಿಕ್ ಗೇರ್ ಕಾರುಗಳು ಲಭ್ಯವಿದ್ದರೂ, ಕಾರು ಪ್ರಿಯರು ಮ್ಯಾನುವಲ್ ಗೇರ್ ಕಾರುಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಆದರೆ ಈ ಕಾರುಗಳಲ್ಲಿ ಒಂದು ಪ್ರಮುಖ ಸಮಸ್ಯೆ ಇದೆ. ಅದೇ ಕ್ಲಚ್​.

ಆದರೆ ಕಾರು ಓಡಿಸುವಾಗ ಕ್ಲಚ್ ಯಾವಾಗ ಒತ್ತಬೇಕು, ಯಾವಾಗ ಬಳಸಬಾರದು ಎಂದು ತಿಳಿದಿರುವುದಿಲ್ಲ. ಹೀಗಾಗಿ ಇದರಿಂದ ಕೆಲವು ತೊಂದರೆಗಳು ಉಲ್ಬಣಗೊಳ್ಳುತ್ತವೆ.

ಕಾರು ಚಾಲನೆ ಮಾಡುವಾಗ, ನಾವು ಅನೇಕ ಬಾರಿ ಕ್ಲಚ್ ಅನ್ನು ಸಂಪೂರ್ಣವಾಗಿ ಒತ್ತುವುದಿಲ್ಲ, ಇದರಿಂದಾಗಿ ವಾಹನದ ಕ್ಲಚ್ ಪ್ಲೇಟ್ ಮತ್ತು ಪ್ರೆಶರ್ ಪ್ಲೇಟ್ ಮೇಲೆ ಒತ್ತಡಬಿದ್ದು ಸಮಸ್ಯೆ ಶುರುವಾಗುತ್ತದೆ. ಇದರಿಂದ ಮೈಲೇಜ್ ಕಡಿಮೆಯಾಗುತ್ತದೆ ಮತ್ತು ಕ್ಲಚ್ ಬೇಗನೆ ಹಾಳಾಗುತ್ತದೆ.

ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಂತಿರುವಾಗ ಅಥವಾ ಟ್ರಾಫಿಕ್ ಜಾಮ್‌ ಇರುವಾಗ ಆಗಾಗ್ಗೆ ಕ್ಲಚ್ ಒತ್ತುತ್ತಲೇ ಇರುತ್ತೇವೆ. ಇದು ತಪ್ಪು ಬಳಕೆ. ಹೀಗೆ ಮಾಡುವುದರಿಂದ, ಕ್ಲಚ್ ಪ್ಲೇಟ್ ಮತ್ತು ಪ್ರೆಶರ್ ಪ್ಲೇಟ್ ನಿರಂತರ ಕೆಲಸ ಮಾಡುತ್ತಿರುತ್ತದೆ. ಮೈಲೇಜ್ ಕುಸಿಯಲು ಇದು ಮುಖ್ಯ ಕಾರಣ.

ಕಾಲುಗಳನ್ನುಕ್ಲಚ್ಮೇಲಿಡುವುದು
ಹಲವು ಕಾರು ಚಾಲಕರು ತಮ್ಮ ಪಾದಗಳನ್ನು ಕ್ಲಚ್ ಪೆಡಲ್ ಮೇಲೆ ಇಟ್ಟು ವಿಶ್ರಾಂತಿ ಪಡೆಯುವ ಅಭ್ಯಾಸವನ್ನು ಹೊಂದಿದ್ದಾರೆ. ಆದರೆ ಇದು ನಿಜಕ್ಕೂ ಕೆಟ್ಟ ಅಭ್ಯಾಸ. ಕ್ಲಚ್ ಮೇಲೆ ಅನಗತ್ಯವಾಗಿ ಪಾದಗಳನ್ನು ಇರಿಸಿದರೆ, ಗೇರ್ ಸರಿಯಾಗಿ ಕೆಲಸ ಮಾಡುವುದಿಲ್ಲ. ಕ್ಲಚ್‌ನ ಜೀವಿತಾವಧಿ ಕಡಿಮೆಯಾಗುತ್ತದೆ. ಹಾಗಾಗಿ ಕ್ಲಚ್ ಬಳಸುವಾಗ ಮಾತ್ರ ಪಾದವನ್ನು ಕ್ಲಚ್ ಮೇಲೆ ಇಟ್ಟರೆ ಒಳ್ಳೆಯದು. ಬಳಕೆಯಲ್ಲಿಲ್ಲದಿದ್ದಾಗ ಅನಗತ್ಯವಾಗಿ ಕ್ಲಚ್ ಮೇಲೆ ಪಾದ ಇಡುವುದನ್ನು ತಪ್ಪಿಸಿ. ಅಗತ್ಯವಿದ್ದಾಗ ಕ್ಲಚ್ ಪೆಡಲ್ ಅನ್ನು ಸಂಪೂರ್ಣವಾಗಿ ಒತ್ತಿರಿ. ಅಗತ್ಯವಿಲ್ಲದಿದ್ದಾಗ ನಿಮ್ಮ ಪಾದವನ್ನು ಅದರ ಮೇಲೆ ಇಡಬೇಡಿ.

ನಿಲ್ಲಿಸಿರುವಾಗಕ್ಲಚ್ಒತ್ತಿಡುವುದು
ಕೆಲವರು ಸಿಗ್ನಲ್‌ನಲ್ಲಿ ಅಥವಾ ಕೆಲವು ಸೆಕೆಂಡ್ ಕಾಲ ಕಾರು ನಿಲ್ಲಿಸಿ ಕಾಯಬೇಕಾದಾಗ ಕ್ಲಚ್ ಹಾಗೂ ಆಕ್ಸಿಲರೇಟರ್ ಬಳಸುತ್ತಾರೆ. ಇದು ತಪ್ಪು. ಇಂಥಲ್ಲಿ ಕಾರ್ ಅನ್ನು ನ್ಯೂಟ್ರಲ್ ಆಗಿಡಿ. ಹಲವಾರು ಚಾಲಕರು ಸಿಗ್ನಲ್‌ಗಳಲ್ಲಿ ಕಾಯುವಾಗ ಕ್ಲಚ್ ಅನ್ನು ಬಳಸುತ್ತಾರೆ. ಇದು ಕೆಟ್ಟ ಅಭ್ಯಾಸ. ಕೆಲವೇ ಕೆಲವು ಸೆಕೆಂಡುಗಳು ಮಾತ್ರ ಕ್ಲಚ್ ತುಳಿಯುತ್ತೇವೆ ಎಂದು ಲಘುವಾಗಿ ಪರಿಗಣಿಸುತ್ತಾರೆ. ಕ್ಲಚ್ ಬಳಕೆ 10 ಸೆಕೆಂಡುಗಳಾಗಿದ್ದರೂ ಅನಗತ್ಯ ಬಳಕೆ ಹೆಚ್ಚಾಗುತ್ತದೆ ಎಂದು ಅವರು ತಿಳಿಯುವುದಿಲ್ಲ. ಸಿಗ್ನಲ್‌ನಲ್ಲಿ ಕ್ಲಚ್ ತುಳಿಯುವ ಬದಲು ಕಾರ್ ಅನ್ನು ನ್ಯೂಟ್ರಲ್‌ನಲ್ಲಿ ಇಡಬಹುದು. ಬಳಕೆಯಲ್ಲಿಲ್ಲದಿದ್ದಾಗ ಕ್ಲಚ್ ಪೆಡಲ್ ಅನ್ನು ತುಳಿಯುವುದರಿಂದ ಅದರ ಜೀವಿತಾವಧಿಯು ಕಡಿಮೆಯಾಗುತ್ತದೆ.

ಬ್ರೇಕ್ಜೊತೆಗೆಕ್ಲಚ್‌ ಬೇಕಿಲ್ಲ
ಬ್ರೇಕ್ ಹಾಕಿದಾಗಲೆಲ್ಲಾ ಕ್ಲಚ್ ಬಳಸಬಾರದೆಂಬುದನ್ನು ನೆನಪಿನಲ್ಲಿಡಿ. ಬ್ರೇಕ್ ಹಾಕುವಾಗ ಹಲವರು ಬ್ರೇಕ್ ಪೆಡಲ್ ಹಾಗೂ ಕ್ಲಚ್ ಪೆಡಲ್ ಎರಡನ್ನೂ ಒತ್ತಿ ಹಿಡಿಯುತ್ತಾರೆ. ಇದು ಇನ್ನೊಂದು ಕೆಟ್ಟ ಅಭ್ಯಾಸ. ಕ್ಲಚ್ ಅನ್ನು ಅನಗತ್ಯವಾಗಿ ಈ ರೀತಿ ಬಳಸದಿರಿ.

ಪಾರ್ಕಿಂಗ್ಬ್ರೇಕ್ಬಳಸಿ
ಕಾರಿನ ಪಾರ್ಕಿಂಗ್ ಬ್ರೇಕ್ ಅನ್ನು ಸಂಪೂರ್ಣವಾಗಿ ಬಳಸಿ. ಕಾರ್ ಅನ್ನು ಗೇರ್‌ನಲ್ಲಿಡುವುದರಿಂದ ಅದು ಉರುಳುವುದನ್ನು ತಡೆಯಬಹುದು. ಆದರೆ ಈ ಕ್ರಿಯೆಯು ಕ್ಲಚ್ ಮೇಲೆ ಹೆಚ್ಚುವರಿ ಒತ್ತಡವನ್ನು ಬೀರುತ್ತದೆ ಎಂಬುದನ್ನು ನೆನಪಿಡಿ.

ನಿಧಾನವಾಗಿಚಲಿಸಿ
ಕಾರ್ ಅನ್ನು ಯಾವಾಗಲೂ ಅತಿಯಾದ ವೇಗದಲ್ಲಿ ಚಾಲನೆ ಮಾಡುವ ಅಗತ್ಯವಿಲ್ಲ. ವೇಗವನ್ನು ಹೆಚ್ಚಿಸುವಾಗ ನಿಧಾನವಾಗಿ ಕ್ಲಚ್ ಅನ್ನು ನಿರ್ವಹಿಸಿ. ಈ ರೀತಿ ಮಾಡುವುದರಿಂದ ನಿಮ್ಮ ಕಾರಿನ ಕ್ಲಚ್ ಜೀವಿತಾವಧಿ ಹೆಚ್ಚಾಗುತ್ತದೆ.

ಅಗತ್ಯವಿದ್ದಾಗಮಾತ್ರಕ್ಲಚ್ಬಳಸಿ
ವಾಹನ ದಟ್ಟಣೆ ಇರುವ ಸಂದರ್ಭಗಳಲ್ಲಿ ಕ್ಲಚ್ ಬಳಕೆ ಹೆಚ್ಚಾಗುತ್ತದೆ. ಅದನ್ನು ನಿರಾಕರಿಸಲು ಸಾಧ್ಯವಿಲ್ಲ. ಆದರೆ ಅಗತ್ಯವಿದ್ದಾಗ ಮಾತ್ರ ಕ್ಲಚ್ ಬಳಸುವಂತೆ ನೋಡಿಕೊಳ್ಳಿ.

ಕ್ಲಚ್ಶಬ್ದವನ್ನುಆಲಿಸಿ
ಕಾಲ ಕಾಲಕ್ಕೆ ಕಾರು ಹಾಗೂ ಕ್ಲಚ್ ಬಗ್ಗೆ ಗಮನ ಹರಿಸಿ. ವಾರಕ್ಕೊಮ್ಮೆಯಾದರೂ ಕಾರಿನಿಂದ ಬರುವ ಶಬ್ದಗಳ ಮೇಲೆ ಹೆಚ್ಚು ಗಮನ ಹರಿಸಿ. ಕಾರಿನಿಂದ ಹೆಚ್ಚು ಶಬ್ದ ಕೇಳಿಸುತ್ತಿದ್ದರೆ ನಿರ್ಲಕ್ಷ್ಯ ಮಾಡದೇ ತಕ್ಷಣವೇ ಸರಿ ಪಡಿಸಿ. ಕ್ಲಚ್ ಜೊತೆಗೆ ಕಾರಿನ ಎಂಜಿನ್ ಆಯಿಲ್ ಅನ್ನು ಕೂಡ ಕಾಲ ಕಾಲಕ್ಕೆ ಬದಲಿಸ ಬೇಕು. ದೋಷಯುಕ್ತ ಎಂಜಿನ್ ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ. ಈ ರೀತಿಯ ಎಂಜಿನ್‌ಗಳು ಹೆಚ್ಚು ಇಂಧನವನ್ನು ಬಳಸುತ್ತವೆ.


Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries