ಕಾಸರಗೋಡು: ಹೊಸಕೋಟೆಯ ಶ್ರೀ ನವಚೇತನ ನೃತ್ಯ ಕಲಾ ಅಕಾಡೆಮಿಯ 48 ನೇ ಭರತನಾಟ್ಯ ರಂಗ ಪ್ರವೇಶ ಕಾರ್ಯಕ್ರಮ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಇತ್ತೀಚೆಗೆ ಜರಗಿತು. ಈ ಸಂದರ್ಭದಲ್ಲಿ ಹೊರನಾಡ ಕನ್ನಡಿಗ ಸಾಧನೆಗಾಗಿ ಗುರುಪ್ರಸಾದ್ ಕೋಟೆಕಣಿ ಅವರನ್ನು `ಶ್ರೇಷ್ಠ ಕನ್ನಡಿಗ ಪ್ರಶಸ್ತಿ' ನೀಡಿ ಸಮ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಅಂತಾರಾಜ್ಯ ನೃತ್ಯ ಪಟು ಗುರು ವಿದ್ವಾನ್ ಕೋಲಾರ ರಮೇಶ್, ಕೆಂಬಳಲುಪಾಳ್ಯ ಶ್ರೀ ನಾಗರಾಜು ಸ್ವಾಮಿ, ಕಲಾಶ್ರೀ ಗುರು ಸುಪರ್ಣ ವೆಂಕಟೇಶ್, ಬೆಂಗಳೂರು ಪೋಲೀಸ್ ವರಿಷ್ಠಾಧಿಕಾರಿ ಎ.ನಾಗರಾಜು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮೈಸೂರು ವಿಭಾಗ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯ ಡಿ.ದೇವರಾಜ್, ಅಂತರರಾಷ್ಟ್ರೀಯ ಗಾಯಕ ಗೊ.ನಾ.ಸ್ವಾಮಿ, ಅಖಿಲ ಭಾರತ ಜನಪದ ಒಕ್ಕೂಟ ಅಧ್ಯಕ್ಷ ಕೆ.ನಾಗರಾಜ್, ಎಂಡೇವರ್ಸ್ ಇಂಟರ್ ನ್ಯಾಶನಲ್ ಸ್ಕೂಲ್ ಸಂಸ್ಥಾಪಕ ಎಂ.ಎಲ್.ಶಿವಶಂಕರ್ ಮೊದಲಾದವರು ಉಪಸ್ಥಿತರಿದ್ದರು.