ಬದಿಯಡ್ಕ: ಆಗಸ್ಟ್ 26ರಂದು ಬದಿಯಡ್ಕದಲ್ಲಿ ಜರಗಲಿರುವ ಬಾಲಗೋಕುಲ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವದ ಪ್ರಯುಕ್ತ ಗುರುವಾರ ಧ್ವಜ ದಿನಾಚರಣೆ ಆಚರಿಸಲಾಯಿತು. ಸಮಿತಿಯ ಅಧ್ಯಕ್ಷ ಜಯರಾಮ ಬಿ. ಧ್ವಜಾರೋಹಣಗೈದರು. ಭಾಸ್ಕರ ಕನಕಪ್ಪಾಡಿ, ದಾಮೋದರ ಚೆಟ್ಟಿಯಾರ್, ಬಿ.ಲಕ್ಷ್ಮಣ ಪ್ರಭು ಕರಿಂಬಿಲ, ರಾಜೇಶ್ ಬಿ.ಕೆ., ಸತೀಶ ಆಚಾರ್ಯ, ಗುರುಪ್ರಸಾದ್ ರೈ ಹಾಗೂ ಬದಿಯಡ್ಕ ಬಾಲಗೋಕುಲದ ಪ್ರಮುಖರು, ಮಕ್ಕಳು ಉಪಸ್ಥಿತರಿದ್ದರು.