ಪೆರ್ಲ: ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ಕೇಂದ್ರ ಸರ್ಕಾರ ಪ್ರಾಯೋಜಿತ ನೇಶನಲ್ ಯೂತ್ ಪೆÇ್ರೀಗ್ರಾಮ್‍ಗೆ ಅಂಗೀಕೃತಗೊಂಡ ಯೂತ್ ಎಂಪೆÇ್ಲೀಯಬಿಲಿಟಿ ಸ್ಕಿಲ್ ಟ್ರೈನಿಂಗ್ ಕೋ-ಒಪರೇಟಿವ್ ಎಜುಕೇಶನ್ ಸೊಸೈಟಿ ಲಿಮಿಟೆಡ್‍ನ ಭಾಗವಾಗಿ 3 ತಿಂಗಳ ಸರ್ಟಿಫಿಕೇಟ್ ಕಂಪ್ಯೂಟರ್ ಕೊರ್ಸು ಈಗಾಗಲೇ ಪುರ್ಣಗೊಂಡಿದ್ದು, ತರಬೇತಿ ಪಡೆದ ಪ್ರಮುಖ ಹಂತದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಅಂಕಪಟ್ಟಿ ವಿತರಣಾ ಸಮಾರಂಭ ನಾಲಂದ ಮಹಾವಿದ್ಯಾಲಯದ ಸಭಾಂಗಣದಲ್ಲಿ ಆ. 14 ರಂದು ಜರುಗಲಿದೆ.
ನಾಲಂದ ಮಹಾವಿದ್ಯಾಲಯದ ಅಧ್ಯಕ್ಷ ಸಿ ಎ ಸುದೀರ್ ಕುಮಾರ್ ಶೆಟ್ಟಿ ಎಣ್ಮಕಜೆ ಅವರು ಪ್ರಮಾಣ ಪತ್ರ ಹಾಗೂ ಅಂಕಪಟ್ಟಿ ವಿತರಿಸುವರು. 3 ತಿಂಗಳ ಸರ್ಟಿಫಿಕೇಟ್ ಕೊರ್ಸು, 6 ತಿಂಗಳ ಡಿಪೆÇ್ಲಮ ಕೊರ್ಸು ಹಾಗೂ 1 ವರ್ಷದ ಪೆÇೀಸ್ಟ್ ಗ್ರಾಜುಯೇಟ್ ಡಿಪೆÇ್ಲಮ, ಕಂಪ್ಯೂಟರ್ ಕೊರ್ಸುಗಳಿಗೆ ದ್ವಿತೀಯ ಹಂತದ ದಾಖಲಾತಿ ಆರಂಭಗೊಂಡಿದೆ. ಹೆಚ್ಚಿನ ಮಾಹಿತಿಗೆ ಕಾಳೇಜು ಕಚೇರಿಯ ಮೊಬೈಲ್ ಸಂಖ್ಯೆ(94004 42175)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.