ಮಧೂರು: ಮಿತ್ರ ಕಲಾ ವೃಂದ ಮಧೂರು ಇದರ ಆಶ್ರಯದಲ್ಲಿ ಕಳೆದ 36ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಅಂತಾರಾಜ್ಯ ಮಟ್ಟದ ಚೆಸ್ ಟೂರ್ನಮೆಂಟ್ ಮಧೂರು ಶಾಲಾ ಪರಿಸರದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಸೂರ್ಯ ಎ.ಕೆ. ಉದ್ಘಾಟಿಸಿದರು. ಡಾ.ಅಭಿನಂದ್ ಕೂಟಪಾರ ಅತಿಥಿ ಯಾಗಿದ್ದರು. ಪಂದ್ಯಾಟದಲ್ಲಿ ಕರ್ನಾಟಕ, ಕೇರಳ ಭಾಗದ ಸುಮಾರು 130 ಚೆಸ್ ಸ್ಪರ್ಧಾಳುಗಳು ಭಾಗವಹಿದರು. ಈ ಪಂದ್ಯಾಟದಲ್ಲಿ 78 ಮಂದಿ ಜೂನಿಯರ್ ವಿಭಾಗ, 52 ಮಂದಿ ಸೀನಿಯರ್ ವಿಭಾಗದ ಸ್ಪರ್ಧೆಯಲ್ಲಿ ಇದ್ದರು.
ಸಂಘದ ಅಧ್ಯಕ್ಷ ಸೂರ್ಯ ಎ.ಕೆ. ಅಧ್ಯಕ್ಷತೆ ವಹಿಸಿದರು. ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಚಂದ್ರಹಾಸ ಕೆ, ರಾಮ ನಂಬೂದಿರಿ. ಸುಕುಮಾರನ್ ಕಾಳಿಕಡವು ಶುಭ ಹಾರೈಸಿದರು. ಸತೀಶ್ ಬಿ, ಸುಜಿತ್ ಕುಮಾರ್, ಸುನಿಲ್ ಕುಮಾರ್, ಅಶೋಕ್ ಕಾರ್ಯಕ್ರಮ ನಡೆಸಲು ಹಾಗೂ ರಾಜೇಶ್ ಕೆ.ಬಿ. ಪ್ರಧಾನ ತೀರ್ಪುಗಾರರಾಗಿ ಸಹಕರಿಸಿದರು. ಕಾರ್ಯದರ್ಶಿ ಕಿಶೋರ್ ವಂದಿಸಿದರು.