ಮಂಜೇಶ್ವರ: ಜಿಲ್ಲಾ ಮಟ್ಟದ ವ್ಯಕ್ತಿತ್ವ ವಿಕಸನ ಶಿಬಿರ ಕೊಡ್ಲಮೊಗರು ಶ್ರೀ ವಾಣೀವಿಜಯ ಪ್ರೌಢಶಾಲೆಯಲ್ಲಿ ಜರುಗಿತು. ಜಿಲ್ಲಾ ಪಂಚಾಯತಿನ ಸದಸ್ಯ ನಾರಾಯಣ ನಾಯ್ಕ್ ಸಮಾರಂಭ ಉದ್ಘಾಟಿಸಿದರು.
ರಾಜ್ಯಮಟ್ಟದ ಕೌನ್ಸಿಲರ್ ಪುಷ್ಪಲತಾ ಸಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ರಂಜಿತ್ ಕೆ.ಪಿ, ಜಿಲ್ಲಾ ಪಂಚಾಯತ್ ಸದಸ್ಯೆ ಕಮಲಾಕ್ಷಿ, ಎಸ್ ಎಸ್ ಕೆ ಯ ಡಿಪಿಸಿ ಬಿಜುರಾಜ್, ಗ್ರಾಮ ಪಂಚಾಯತಿ ಸದಸ್ಯರಾದ ಆಶಾಲತಾ, ಮಂಜೇಶ್ವರದ ಬಿಪಿಸಿ ಜಾಯ್ ಉಪಸ್ಥಿತರಿದ್ದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ಮಜಿದ್ ಅಧ್ಯಕ್ಷತೆ ವಹಿಸಿದ್ದರು.
ಶಿಕ್ಷಕಿ ಆಶಾದಿಲೀಪ್ ಸ್ವಾಗತಿಸಿದರು. ಸಂಧ್ಯಾ ಕಾರ್ಯಕ್ರಮ ನಿರೂಪಿಸಿದರು. ಅಜಿತ್ ವಂದಿಸಿದರು.
ಶಿಬಿರದಲ್ಲಿ ವಿದ್ಯಾರ್ಥಿಗಳು ಮತ್ತು ಅವರ ಪೆÇೀಷಕರು ಭಾಗವಹಿಸಿದ್ದರು. ಮಂಜೇಶ್ವರ ಬಿ ಆರ್ ಸಿ ಯ ಚಂದ್ರಿಕಾ, ಶಾರದಾ ಹಾಗೂ ಶಾಲೆಯ ಮುಖ್ಯ ಶಿಕ್ಷಕಿ ಕೃಷ್ಣವೇಣಿ ಇವರ ನೇತೃತ್ವದಲ್ಲಿ ಶಿಬಿರ ಆಯೋಜಿಸಲಾಗಿತ್ತು.