ಮಧೂರು: ಬಂಟರ ಸಂಘ ಮಧೂರು ಸಮಿತಿಯ ವತಿಯಿಂದ ಅಟಿದ ಕೂಟ ಮಧೂರಿನ ಸಮೀಪದ ಪರಕ್ಕಿಲದಲ್ಲಿರುವ ಸಂಘದ ಕಾರ್ಯಾಲಯ ಭವನದಲ್ಲಿ ಸಂಭ್ರಮದಿಂದ ನಡೆಯಿತು.ಬಂಟ ಮಹಿಳಾ ಸಮಿತಿ ವತಿಯಿಂದ ಜರಗಿದ ಕಾರ್ಯಕ್ರಮದಲ್ಲಿ ಸುಮಾರು 25 ಕ್ಕೂ ಮಿಕ್ಕಿ ವಿವಿಧ ತಿಂಡಿ ತಿನಸುಗಳನ್ನು ತಯಾರಿಸಲಾಗಿತು.
ಕೂಡ್ಲು, ಮಧೂರು, ಮಾಯಿಪ್ಪಾಡಿ ಸಿರಿಬಾಗಿಲು ಗಳ ಮಹಿಳೆಯರು ಆಟಿ ತಿಂಗಳ ವಿಶೇಷ ಖಾದ್ಯಗಳನ್ನು ತಯಾರಿಸಿ ಪ್ರದರ್ಶಿಸಿದ್ದರು. ಕಾರ್ಯಕ್ರಮವನ್ನು ಲೀಲಾವತಿ ಟೀಚರ್ ಉದ್ಘಾಟಿಸಿ ತುಳುನಾಡಿನಲ್ಲಿ ಆಟಿ ತಿಂಗಳ ಆಚರಣೆಯ ಕುರಿತು ಹಾಗೂ ಅದರ ಮಹತ್ವವನ್ನ ವಿವರಿಸಿದರು. ಬಂಟರ ಸಂಘದ ಮಧೂರು ಸಮಿತಿ ಅಧ್ಯಕ್ಷ ರಾಮಕೃಷ್ಣ ಆಳ್ವ ಅಧ್ಯಕ್ಷತೆ ವಹಿಸಿದರು. ಹಿರಿಯ ವಕೀಲರು ಹಾಗೂ ದ. ಕ. ಜಿಲ್ಲಾ ಹರಿಕಥಾ ಪರಿಷತ್ ಅಧ್ಯಕ್ಷ ಮಹಾಬಲ ಶೆಟ್ಟಿ, ಕಾಸರಗೋಡು ಜಿಲ್ಲಾ ಬಂಟರ ಸಂಘದ ಮಾಜಿ ಅಧ್ಯಕ್ಷ ವಕೀಲ ಸದಾನಂದ ರೈ, ಕಾಸರಗೋಡು ವಲಯ ಸಂಘದ ಅಧ್ಯಕ್ಷ ಸುಬ್ಬಣ್ಣ ಆಳ್ವ ಕುಚಿಕ್ಕಾಡು, ಬಾಬು ರೈ ಗಂಗೆ, ಅಶೋಕ್ ರೈ, ಮಹಿಳಾ ಸಮಿತಿಯ ಗೌರವ ಅಧ್ಯಕ್ಷೆ ನಾಟಿ ವೈದ್ಯೆ ಯಮುನಾ ಶೆಟ್ಟಿ ಉಪಸ್ಥಿತರಿದ್ದರು.
ಮಹಿಳಾ ಸಮಿತಿಯ ಶ್ಯಾಮಲಾ ಎಂ ಶೆಟ್ಟಿ ಕುದ್ರೆಪ್ಪಾಡಿ ಸ್ವಾಗತಿಸಿದರು. ರೋಹಿತಾಕ್ಷಿ ಬಿ ರೈ ಕಾರ್ಯಕ್ರಮ ನಿರೂಪಿಸಿದರು. ಜಯಲಕ್ಷ್ಮಿ ಅಡಪ ವಂದಿಸಿದರು. ಈ ಸಂದರ್ಭ ಆಷಡ ಮಾಸದ ವಿಶೇಷ ತಿನಿಸುಗಳ ಪ್ರದರ್ಶನ ನಡೆಯಿತು. ಈ ಸಂದರ್ಭ ಆಟಿ ತಿನಿಸುಗಳ ವಿತರಣೆ ನಡೆಯಿತು.